Cricket : ಕೈ ಬೆರಳಿಗೆ ಗಾಯ : ಏಕದಿನ, ಟಿ20 ಸರಣಿಗೆ Faf du Plessis ಅಲಭ್ಯ

ಮೊದಲ ಮೂರು ಏಕದಿನ ಪಂದ್ಯಗಳಿಂದ ಹೊರಗುಳಿದಿರುವ ಎಬಿ ಡಿವಿಲಿಯರ್ಸ್ ಅನುಪಸ್ಥಿತಿಯ ಬೆನ್ನಲ್ಲೇ ದಕ್ಷಿಣ ಆಫ್ರಿಕಾ ತಂಡಕ್ಕೆ ಮತ್ತೊಂದು ಆಘಾತ ಎದುರಾಗಿದೆ. ಕೈ ಬೆರಳಿಗೆ ಉಂಟಾಗಿರುವ ಗಾಯಕ ಕಾರಣದಿಂದಾಗಿ ಆತಿಥೇಯ ತಂಡದ ನಾಯಕ ಫಾಫ್ ಡು ಪ್ಲೆಸಿಸ್ ಪ್ರಸಕ್ತ ನಡೆಯುತ್ತಿರುವ ಭಾರತ ಹಾಗೂ ದಕ್ಷಿಣ ಆಫ್ರಿಕಾ ಸರಣಿಯಿಂದ ಹೊರಗುಳಿಯಲಿದ್ದಾರೆ.

ಭಾರತದ ವಿರುದ್ಧ ಡರ್ಬನ್ ನಲ್ಲಿ ನಡೆದಿದ್ದ ಮೊದಲ ಏಕದಿನ ಪಂದ್ಯದಲ್ಲಿ ಫಾಫ್ ಕೈಬೆರಳಿಗೆ ಗಾಯವಾಗಿತ್ತು. ಗುಣವಾಗಲು 3 ರಿಂದ 6 ವಾರಗಳ ಸಮಯ ಬೇಕಾಗಬಹುದೆಂದು ತಂಡದ ವೈದ್ಯರು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಇನ್ನು ಉಳಿದಿರುವ 5 ಏಕದಿನ ಪಂದ್ಯಗಳು ಹಾಗೂ 3 ಟಿ-20 ಪಂದ್ಯಗಳಿಗೆ ಪ್ಲೆಸಿಸ್ ಅಲಭ್ಯರಾಗಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com