ಚಂದನ್‌ ಶೆಟ್ಟಿಗೆ ಫಿಕ್ಸ್‌ ಆಯ್ತು ಮದುವೆ..ಹುಡುಗಿ ಶೃುತಿನೂ ಅಲ್ಲ, ನಿವೇದಿತಾನೂ ಅಲ್ಲ..ಮತ್ಯಾರು ?

ಬಿಗ್‌ಬಾಸ್‌ ಸೀಸನ್‌ 5ರಲ್ಲಿ ಜಯಗಳಿಸಿದ್ದ ರ್ಯಾಪರ್‌ ಚಂದನ್‌ ಶೆಟ್ಟಿ ಬಗ್ಗೆಯೇ ಎಲ್ಲೆಡೆಯೂ ಮಾತು ಕೇಳಿಬರುತ್ತಿದೆ. ಹೌದು ಚಂದನ್‌ ಬಿಗ್‌ ಮನೆಯಲ್ಲಿದ್ದಾಗ ಒಮ್ಮೆ ಮನೆಗೆ ಬಂದಿದ್ದ ಚಂದನ್‌ ಶೆಟ್ಟಿ ತಂದೆ ನಿನಗೆ ಮದುವೆ ಮಾಡಿಸುವುದಾಗಿ ಹೇಳಿದ್ದರು. ಅಂತೆಯೇ ಈಗ ಚಂದನ್‌ ಶೆಟ್ಟಿಗೆ ಮದುವೆ ಮಾಡಿಸಲು ಮುಂದಾಗಿದ್ದಾರೆ.

ಹೌದು ರ್ಯಾಪರ್‌ ಚಂದನ್‌ ಶೆಟ್ಟಿ ಬಿಗ್‌ಬಾಸ್‌ ಮನೆಯಲ್ಲಿರುವಾಗಲೇ ನಾನು ಮದುವೆಯಾಗೋ ಹುಡುಗಿ ಗೃಹಿಣಿಯಾಗಿರಬೇಕು. ತನ್ನ ತಂದೆ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕು….ಹೀಗೆ ಅನೇಕ ಷರತ್ತುಗಳನ್ನು ಹಾಕಿದ್ದರು. ಅಲ್ಲದೆ ಶೃುತಿ ಮೇಲೆ ಚಂದನ್‌ಗೆ ಕ್ರಶ್ ಆಗಿದೆ ಎಂದೆಲ್ಲಾ ಸಾಮಾಜಿ ಜಾಲತಾಣಗಳಲ್ಲಿ ಹೇಳಲಾಗುತ್ತಿತ್ತು.

ಆದರೆ ಈಗ ಎಲ್ಲಾ ಊಹಾಪೋಹಗಳಿಗೂ ತೆರೆಬಿದ್ದಿದ್ದು, ಚಂದನ್‌, ಅಗ್ನಿಸಾಕ್ಷಿ ಧಾರಾವಾಹಿ ಖ್ಯಾತಿಯ ಸನ್ನಿಧಿ (ವೈಷ್ಣವಿ)ಯವರನ್ನು ಮದುವೆಯಾಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಇದೇ ಫೆಬ್ರವರಿ 11ರಂದು ನಿಶ್ಚಿತಾರ್ಥ ನಡೆಯಲಿದೆ ಎಂದು ಬಲ್ಲ ಮೂಲಗಳು ಹೇಳುತ್ತಿವೆ. ಈ ಸುದ್ದಿ ನಿಜವೋ ಸುಳ್ಳೋ ಎಂದು ಫೆಬ್ರವರಿ 11ರಂದು ತಿಳಿಯಲಿದೆ.

Leave a Reply

Your email address will not be published.

Social Media Auto Publish Powered By : XYZScripts.com