ತಾನು ನಟಿಸಿದ ಸಿನಿಮಾ ನೋಡಲು ಮುಸುಕು ಹಾಕಿಕೊಂಡು ಬಂದ್ರು ಈ ಸ್ಟಾರ್‌ ನಟಿ…!

ಖ್ಯಾತ ನಟಿಯೊಬ್ಬರು ತಮ್ಮ ಸಿನಿಮಾದ ಬಗ್ಗೆ ಜನ ಏನೆನ್ನುತ್ತಾರೆ. ಸಿನಿಮಾದ ಬಗ್ಗೆ ಜನರ ಪ್ರತಿಕ್ರಿಯೆ ಏನು ಎಂದು ತಿಳಿಯುವ ಸಲುವಾಗಿ ವೇಷ ಬದಲಿಸಿಕೊಂಡು ಚಿತ್ರಮಂದಿರದೊಳಗೆ ಹೋಗಿ ಸಿನಿಮಾ ನೋಡಿ ಬಂದಿದ್ದಾರೆ.

ಹೌದು ಸಿನಿಮಾ ಸ್ಟಾರ್‌ಗಳು ಎಲ್ಲರಂತಲ್ಲ. ಅವರು ಎಲ್ಲೇ ಹೋದರೂ ಅಭಿಮಾನಿಗಳು ಮುತ್ತಿಕೊಂಡು ಬಿಡುತ್ತಾರೆ. ಈ ಕಾರಣಕ್ಕಾಗಿಯೇ ನಟಿ ಹರಿಪ್ರಿಯಾ ತಮ್ಮ ಸಿನಿಮಾ ನೋಡಿದ ಬಳಿಕ ಜನ ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ತಿಳಿದುಕೊಳ್ಳಲು ಮುಖಕ್ಕೆ ಶಾಲನ್ನು ಸುತ್ತಿಕೊಂಡು ಬಂದು ಅವರ ಅಭಿನಯದ ಜೈಸಿಂಹ ಸಿನಿಮಾ ನೋಡಿ ಹೋಗಿದ್ದಾರೆ.

ಬಳಿಕ ಈ ಬಗ್ಗೆ ಹರಿಪ್ರಿಯಾ ಟ್ವೀಟ್‌ ಮಾಡಿದ್ದು, ಹಿಂದೆಂದೂ ನಾನು ಈ ರೀತಿ ಮಾಡಿರಲಿಲ್ಲ. ಸಿನಿಮಾದ ಬಗ್ಗೆ ಜನರಿಗಿರುವ ಪ್ರೀತಿ ನೋಡಿ ಸಂತೋಷವಾಯಿತು. ಮುಂದೆ ಸಹ ಇದೇ ರೀತಿ ಸಿನಿಮಾ ನೋಡುತ್ತೇನೆ ಎಂದಿದ್ದಾರೆ.

 

 

 

Leave a Reply

Your email address will not be published.

Social Media Auto Publish Powered By : XYZScripts.com