ಚಿತ್ರನಟಿ ಸಾನುಷಾಗೆ ರೈಲಿನಲ್ಲಿ ಲೈಂಗಿಕ ಕಿರುಕುಳ : ಸಹಾಯಕ್ಕೆ ಬಾರದ ಪ್ರಯಾಣಿಕರು..!

ರೈಲಿನಲ್ಲಿ ಪ್ರಯಣಿಸುತ್ತಿದ್ದ ವೇಳೆ ಚಿತ್ರನಟಿ ಸಾನುಷಾ ಸಂತೋಷ್ ಅವರಿಗೆ ವ್ಯಕ್ತಿಯೊಬ್ಬ ಲೈಂಗಿಕ ಕಿರುಕುಳ ನೀಡಿದ ಘಟನೆ ಶುಕ್ರವಾರ ನಡೆದಿದೆ. ತಿರುವನಂತಪುರಂ ನಿಂದ ಮಂಗಳೂರು ಸೆಂಟ್ರಲ್ ನಡುವೆ ಓಡಾಡುವ ಮವೇಲಿ ಎಕ್ಸಪ್ರೆಸ್ ನಲ್ಲಿ ಶುಕ್ರವಾರ ಬೆಳಗಿನ ಜಾವ ಘಟನೆ ನಡೆದಿದೆ.

ರೇಲ್ವೆ ಬೋಗಿಯೊಂದರಲ್ಲಿ ಮೇಲಿನ ಬರ್ತ್ ನಲ್ಲಿ ಮಲಗಿದ್ದ ಸಾನುಷಾ ಅವರ ತುಟಿಯ ಮೇಲೆ ವ್ಯಕ್ತಿಯೊಬ್ಬ ಕೈಯಾಡಿಸತೊಡಗಿದ್ದಾನೆ. ಇದರಿಂದ ಎಚ್ಚೆತ್ತ ಸಾನುಷಾ ಆತನ ಕೈ ಹಿಡಿದು, ಬೆರಳುಗಳನ್ನು ತಿರುವಿ ಸಹಾಯಕ್ಕೆಂದು ಕಿರುಚಿದ್ದಾರೆ. ಕೆಳಗಿನ ಬರ್ತ್ ನಲ್ಲಿ ಮಲಗಿದ್ದ ಪ್ರಯಾಣಿಕನೊಬ್ಬ ಇದನ್ನೆಲ್ಲ ಗಮನಿಸಿಯೂ ನಟಿಯ ಸಹಾಯಕ್ಕೆ ಮುಂದಾಗಲಿಲ್ಲ.

ನಂತರ ಸಾನುಷಾ ಅವರೊಂದಿಗೆ ಪ್ರಯಾಣಿಸುತ್ತಿದ್ದ, ಸ್ಕ್ರಿಪ್ಟ್ ಲೇಖಕ ಉನ್ನಿ ಹಾಗೂ ಮತ್ತೋರ್ವ ಪ್ರಯಾಣಿಕ ರೆಂಜಿತ್ ಎಂಬುವವರು ಸಹಾಯಕ್ಕೆ ಬಂದಿದ್ದಾರೆ. ಆರೋಪಿಯನ್ನು ಅಲುಗಾಡಲು ಬಿಡದ ಸಾನುಷಾ, ಬಳಿಕ ಟಿಟಿ ಅವರ ಸಹಾಯದಿಂದ ರೇಲ್ವೆ ಪೋಲೀಸರಿಗೆ ದೂರನ್ನು ನೀಡಿದ್ದಾರೆ. ಬೇಬಿ ಸಾನುಷಾ ಎಂದೇ ಹೆಸರಾಗಿರುವ ಸಾನುಷಾ ಸಂತೋಷ್ ಮಲಯಾಳಂ, ತಮಿಳು ಹಾಗೂ ತೆಲುಗು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com