Mandya : JDS ಗೆ ಕೈ ಕೊಟ್ಟು ಕಾಂಗ್ರೆಸ್‌ “ಕೈ” ಹಿಡಿದ ಚೆಲುವರಾಯಸ್ವಾಮಿ…

ಮಂಡ್ಯ : ಜೆಡಿಎಸ್‌ ನಾಯಕ ಚೆಲುವರಾಯಸ್ವಾಮಿ ಕಾಂಗ್ರೆಸ್‌ ಸೇರ್ಪಡೆಗೊಳ್ಳುವುದಾಗಿ ಘೋಷಿಸಿದ್ದಾರೆ. ಮಂಡ್ಯದ ಹೆಲಿಪ್ಯಾಡ್‌ನಲ್ಲಿ ಕಾಂಗ್ರೆಸ್‌ ಸಚಿವ ಡಿ.ಕೆ ಶಿವಕುಮಾರ್‌ ಹಾಗೂ ಚೆಲುವರಾಯಸ್ವಾಮಿ ಮಾತುಕತೆ ನಡೆಸಿದ್ದು, ಚೆಲುವರಾಯ ಸ್ವಾಮಿಯವರಿಗೆ ಟಿಕೆಟ್‌ ನೀಡುವ ಭರವಸೆ ನೀಡಿದ್ದಾರೆನ್ನಲಾಗಿದೆ.

ಚರ್ಚೆ ಬಳಿಕ ಸಮಾರಂಭವೊಂದರಲ್ಲಿ ಭಾಗವಹಿಸಿದ್ದ ಚೆಲುವರಾಯಸ್ವಾಮಿ ತಮ್ಮ ಕಾಂಗ್ರೆಸ್‌ ಸೇರ್ಪಡೆಯನ್ನು ಖಚಿತಪಡಿಸಿದ್ದಾರೆ. ನನ್ನ  ಬಿಟ್ಟು ಬೇರೆ ಯಾರೇ ಆದ್ರೂ ಒಂದು ಒಳ್ಳೆ ಕೆಲಸ ಮಾಡಿರೋದನ್ನ ತೋರಿಸಿದರೆ ರಾಜಕೀಯ ಬಿಡುತ್ತೇನೆ. ಜಾತಿಗಳ ನಡುವೆ ವಿಷ ಬೀಜ ಬಿತ್ತೋದಲ್ಲ. ಉತ್ತಮ ಕೆಲಸ ಮಾಡುವವರು ರಾಜಕಾರಣಿ ಆಗಬೇಕು. ನಾನೂ ಯಾವತ್ತೂ ಹುಡುಗಾಟ ಆಡಿಲ್ಲ . ನಾನು ಕಾಂಗ್ರೆಸ್‌ ಸೇರುತ್ತಿದ್ದೇನೆ. ಕಾಂಗ್ರೆಸ್‌ನಿಂದಲೇ ಸ್ಪರ್ಧೆ ಮಾಡುತ್ತೇ‌ನೆ ಎಂದಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com