Mandya : ಐದು ರೂಪಾಯಿ ಡಾಕ್ಟರ್‌ ಶಂಕರೇಗೌಡರಿಗೆ ಗಾಳ ಹಾಕಿದ BJP…!

ಮಂಡ್ಯ : ಐದು ರೂಪಾಯಿ ಡಾಕ್ಟರ್‌ ಎಂದೇ ಖ್ಯಾತಿ ಪಡೆದಿರುವ ಶಂಕರೇಗೌಡರನ್ನು ಬಿಜೆಪಿ ತನ್ನ ಪಕ್ಷಕ್ಕೆ ಸೆಳೆಯಲು ಪ್ರಯತ್ನ ನಡೆಸಿದೆ. ಈ ನಿಟ್ಟಿನಲ್ಲಿ ಮಂಡ್ಯದ ಬಿಜೆಪಿ ಉಸ್ತುವಾರಿ ನಾಯಕತ್ವ ವಹಿಸಿಕೊಂಡಿರುವ ಚನ್ನಪಟ್ಟಣ ಕ್ಷೇತ್ರದ ಶಾಸಕ ಸಿ.ಪಿ ಯೋಗೇಶ್ವರ್‌ ಇಂದು ಡಾ. ಶಂಕರೇಗೌಡರ ಜೊತೆ ಮಾತುಕತೆ ನಡೆಸಿದ್ದಾರೆನ್ನಲಾಗಿದೆ.

ಇಂದು ಮಂಡ್ಯದ ಶಂಕರೇಗೌಡ ಅವರ ನಿವಾಸಕ್ಕೆ ಭೇಟಿ ನೀಡಿರುವ ಯೋಗೇಶ್ವರ್ ಗೌಡರ ಜೊತೆ ಮಾತುಕತೆ ನಡೆಸಿದ್ದಾರೆ. ಸದ್ಯ ಜಿಲ್ಲಾ ಪಂಚಾಯತ್‌ನ ಸದಸ್ಯರಾಗಿರುವ ಶಂಕರೇಗೌಡರು ಈ ಬಾರಿ ಮಂಡ್ಯದಿಂದ ವಿಧಾನಸಭೆಗೆ ಸ್ಪರ್ಧಿಸುವ ಕುರಿತು ಆಸಕ್ತಿ ತೋರಿದ್ದಾರೆ ಎನ್ನಲಾಗಿದೆ.

ಅಲ್ಲದೆ ಈ ಕುರಿತು ಶಂಕರೇಗೌಡರು ಹೇಳಿಕೆ ನೀಡಿದ್ದು, ಯೋಗೇಶ್ವರ್ ಅವರು ನನ್ನನ್ನು ಪಕ್ಷಕ್ಕೆ ಆಹ್ವಾನಿಸಿದ್ದಾರೆ. ಆದರೆ ನಾನೀಗ ಜೆಡಿಎಸ್‌ನಲ್ಲಿದ್ದೇನೆ. ಮುಂದಿನ ದಿನಗಳಲ್ಲಿ ಬಿಜೆಪಿಗೆ ಸೇರುವುದರ ಬಗ್ಗೆ ಯೋಚಿಸುವುದಾಗಿ ಹೇಳಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com