India Open Boxing : ಚಿನ್ನ ಗೆದ್ದ ಮೇರಿ ಕೋಮ್ : ಭಾರತದ ಮಹಿಳೆಯರಿಗೆ 5 ಸ್ವರ್ಣ ಪದಕ

ಇಂಡಿಯಾ ಓಪನ್ ಬಾಕ್ಸಿಂಗ್ ಚಾಂಪಿಯನ್ಷಿಪ್ ನ ಮಹಿಳೆಯರ 48 ಕೆಜಿ ವಿಭಾಗದಲ್ಲಿ ಭಾರತದ ಮೇರಿ ಕೋಮ್ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ. ಗುರುವಾರ ನಡೆದ ಫೈನಲ್ ಪಂದ್ಯದಲ್ಲಿ ಫಿಲಿಪೀನ್ಸ್ ನ ಜೋಸಿ ಗಬುಕೋ ಅವರನ್ನು 4-1 ರಿಂದ ಮಣಿಸಿದ ಮೇರಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.

ಭಾರತದ ಮತ್ತೋರ್ವ ಬಾಕ್ಸರ್ ಪ್ವಿಲಾವೊ ಬಾಸುಮತ್ರಿ ಮಹಿಳೆಯರ 64 ಕೆಜಿ ವಿಭಾಗದಲ್ಲಿ ಥಾಯ್ಲೆಂಡಿನ ಸುಡಾಪಾರ್ನ್ ಸೀಸೊಂಡಿ ಅವರನ್ನು 3-2 ರಿಂದ ಸೋಲಿಸಿ ಚಿನ್ನದ ಪದಕ ಗೆದ್ದಿದ್ದಾರೆ. ಭಾರತದ ಲೊವ್‌ಲಿನಾ ಬೋರ್ಗೊಹೇನ್‌ (69ಕೆ.ಜಿ), ಪಿಂಕಿ ಜಂಗ್ರಾ (51 ಕೆಜಿ), ಎಲ್. ಸರಿತಾದೇವಿ (60 ಕೆಜಿ) ಅವರೂ ಸಹ ಮಹಿಳೆಯರ ವಿಭಾಗದಲ್ಲಿ ಬಂಗಾರದ ಪದಕವನ್ನು ಜಯಿಸಿದ್ದಾರೆ.

ಪುರುಷರ ವಿಣಾಗದಲ್ಲಿ ಭಾರತದ ಮನೀಶ್ ಕೌಶಿಕ್ (60 ಕೆ.ಜಿ) ಹಾಗೂ ಸಂಜೀತ್ (91 ಕೆ.ಜಿ) ಸ್ವರ್ಣ ಪದಕ ಗೆದ್ದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com