ಸಿನಿಮಾ ನೋಡಲು ಥಿಯೇಟರ್‌ ಒಳಗೆ ಹೋದ ಯುವಕ – ಯುವತಿ…….ಆಮೇಲಾಗಿದ್ದೇನು…?

ಹೈದರಾಬಾದ್‌ :ಫೇಸ್‌ಬುಕ್‌ನಲ್ಲಿ ಅನೇಕರು ಪರಿಚಯವಿರುತ್ತಾರೆ. ಅನೇಕರು ಉತ್ತಮ ಸ್ನೇಹಿತರಾದ ಸಂಗತಿ ಸಹ ನಡೆದಿದೆ. ಆದರೆ ಫೇಸ್‌ಬುಕ್‌ ಸ್ನೇಹಿತರಿಂದ ಒಳ್ಳೆಯದಾಗಿದ್ದಕ್ಕಿಂತ ಕೆಟ್ಟದ್ದಾಗಿದ್ದೆ ಹೆಚ್ಚು ಪ್ರಕರಣಗಳು ಕೇಳಿಬರುತ್ತಿರುತ್ತವೆ. ಅಂತದ್ದೇ ಪ್ರಕರಣವೊಂದು ಹೈದರಾಬಾದ್‌ನಲ್ಲಿ ನಡೆದಿದೆ.
ಸಿನಿಮಾ ನೋಡಲು ಯುವತಿಯೊಬ್ಬಳು ಚಿತ್ರಮಂದಿರಕ್ಕೆ ಹೋದ ವೇಳೆ ಕಾಮುಕನೊಬ ಅತ್ಯಾಚಾರ ನೆಡೆಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಕಳೆದ ಸೋಮವಾರ ಘಟನೆ ನಡೆದಿರುವುದಾಗಿ ತಿಳಿದುಬಂದಿದೆ. ಪ್ರಕರಣ ಸಂಬಂದ ಭಿಕ್ಷಾಪತಿ ಎಂಬ ಹೆಸರಿನ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.
ಸಂತ್ರಸ್ತ  ಯುವತಿ ಹಾಗೂ ಆರೋಪಿ ಭಿಕ್ಷಾಪತಿ ಇಬ್ಬರೂ ಫೇಸ್‌ಬುಕ್‌ ಸ್ನೇಹಿತರಾಗಿದ್ದು, ಇಬ್ಬರ ನಡುವೆ ಸ್ನೇಹ ಬೆಳೆದು, ಬಳಿಕ ಇಬ್ಬರೂ ಭೇಟಿಯಾಗಲು ನಿರ್ಧರಿಸಿದ್ದಾರೆ. ಇದಕ್ಕೆ ಯುವತಿ ಸಹ ಒಪ್ಪಿದ್ದಾಳೆ. ಸೋಮವಾರ ಇಬ್ಬರೂ ಮಾಲ್‌ವೊಂದರಲ್ಲಿ ಸುತ್ತಾಡಿ, ಪದ್ಮಾವತ್ ಸಿನಿಮಾ ನೋಡಲು ತೆರಳಿದ್ದಾರೆ. ಬಾಲ್ಕನಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಇರದಿದ್ದ ಸಮಯವನ್ನು ಬಳಸಿಕೊಂಡ ಆರೋಪಿ ಯುವತಿ ಮೇಲೆ ಅತ್ಯಾಚಾರವೆಸಗಿದ್ದಾನೆ.
ಈ ಸಂಬಂಧ ಯುವತಿ ಸಿಕಂದರಾಬಾದ್‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾಳೆ. ಆರೋಪಿ ಭಿಕ್ಷಾಪತಿಯನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಅಲ್ಲದೆ ಚಿತ್ರ ಮಂದಿರದ ಮಾಲೀಕನನ್ನೂ ವಶಕ್ಕೆ ಪಡೆದಿರುವುದಾಗಿ ತಿಳಿದುಬಂದಿದೆ.

Leave a Reply

Your email address will not be published.

Social Media Auto Publish Powered By : XYZScripts.com