ಚುನಾವಣೆ ಇದೆ, ಆದಷ್ಟು ಬೇಗ ಬರ್ತೇನೆ : ಕಾರ್ಯಕರ್ತರಿಗೆ ಧೈರ್ಯ ತುಂಬಿದ MLA ರವೀಂದ್ರ

ದಾವಣಗೆರೆ : ಅನಾರೋಗ್ಯದ ಹಿನ್ನೆಲೆಯಲ್ಲಿ ಸಿಂಗಾಪುರ ಆಸ್ಪತ್ರೆಗೆ ದಾಖಲಾಗಿರುವ ಶಾಸಕ ಎಂ.ಪಿ ರವೀಂದ್ರ ಆಸ್ಪತ್ರೆಯಿಂದಲೇ ಕಾರ್ಯಕರ್ತರಿಗೆ ಧೈರ್ಯ ತುಂಬಿದ್ದಾರೆ.

ಚುನಾವಣೆ ಹಿನ್ನೆಲೆಯಲ್ಲಿ ಬೇಗ ರೆಡಿಯಾಗಲು ಆಸ್ಪತ್ರೆಗೆ ದಾಖಲಾಗಿದ್ದೇನೆ. ರವೀಂದ್ರನಿಗಿದು ಎರಡನೇ ಬಾರಿ ಮೂರನೇ ಬಾರಿ ಎಂದು ಜನ ಏನೇನೋ ಮಾತನಾಡುತ್ತಾರೆ. ಆದರೆ ಅದಕ್ಕೆಲ್ಲ ತಲೆಕೆಡಿಸಿಕೊಳ್ಳಬೇಡಿ. ಇನ್ನೊಂದು ವಾರದಲ್ಲಿ ವಾಪಸ್‌ ಬರುತ್ತೇನೆ. ಚೆನ್ನಾಗಿ ಪ್ರಚಾರ ಮಾಡಿ ಮತ್ತೆ ಗೆಲ್ಲೋಣ ಎಂದು ವಾಟ್ಸಾಪ್‌ ಮೂಲಕ ಸಂದೇಶ ಕಳಿಸಿದ್ದಾರೆ.

 

ಇನ್ನು ರವೀಂದ್ರ ಸಿಂಗಾಪುರ ಆಸ್ಪತ್ರೆಗೆ ದಾಖಲಾಗಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿ ಬಿತ್ತರವಾದ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಅವರು, ನನಗೇನೂ ಆಗಿಲ್ಲ. ನಾನು ಆರಾಮಾಗಿದ್ದೇನೆ ಎಂದಿದ್ದಾರೆ.

Leave a Reply

Your email address will not be published.