Cricket U-19 WC : ಭಾರತ – ಆಸ್ಟ್ರೇಲಿಯಾ FINAL : ಟ್ರೋಫಿ ಗೆಲ್ಲುವರೇ ದ್ರಾವಿಡ್ ಬಾಯ್ಸ್.?

ಶನಿವಾರ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವೆ ಅಂಡರ್-19 ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯ ನಡೆಯಲಿದೆ. ಟೂರ್ನಿಯ ಆತಿಥ್ಯ ವಹಿಸಿರುವ ನ್ಯೂಜಿಲೆಂಡ್ ನ ಮೌಂಟ್ ಮಂಗಾನೂಯಿಯ ಬೇ ಓವಲ್ ಮೈದಾನದಲ್ಲಿ ಅಂತಿಮ ಹಣಾಹಣಿ ನಡೆಯಲಿದೆ.

Image result for dravid boys

ನಾಲ್ಕನೇ ಬಾರಿಗೆ ಕಿರಿಯರ ವಿಶ್ವಕಪ್ ಎತ್ತಿಹಿಡಿಯುವ ಕನಸನ್ನು ನನಸಾಗಿಸಿಕೊಳ್ಳಲು ಪೃಥ್ವಿ ಶಾ ನೇತೃತ್ವದ ಟೀಮ್ ಇಂಡಿಯಾದ ಯುವ ಆಟಗಾರರು ಪ್ರಯತ್ನಿಸಲಿದ್ದಾರೆ. ಕೋಚ್ ‘ದಿ ವಾಲ್’ ಖ್ಯಾತಿಯ ರಾಹುಲ್ ದ್ರಾವಿಡ್ ಮಾರ್ಗದರ್ಶನದಲ್ಲಿ ಪಳಗಿರುವ ಆಟಗಾರರು ಫೈನಲ್ ಗೆಲುವಿನ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ.

Image result for dravid boys

ಸೆಮಿಫೈನಲ್ ನಲ್ಲಿ ಪಾಕ್ ವಿರುದ್ಧ ಭರ್ಜರಿ ಶತಕ ಸಿಡಿಸಿದ್ದ ಶುಭಮನ್ ಗಿಲ್ ಉತ್ತಮ ಫಾರ್ಮ್ ನಲ್ಲಿದ್ದಾರೆ. ಮಂಜೋತ್ ಕಾಲ್ರಾ, ಪೃಥ್ವಿ ಶಾ ಬ್ಯಾಟಿಂಗ್ ಬೆನ್ನೆಲುಬಾಗಿದ್ದರೆ, ಕಮಲೇಶ್ ನಗರಕೋಟಿ, ಶಿವಮ್ ಮವಿ ಭಾರತದ ಬೌಲಿಂಗ್ ಬಲ ಎನಿಸಿದ್ದಾರೆ.

Image result for dravid boys

ಟೂರ್ನಿಯ ಆರಂಭದಲ್ಲಿ ‘ಬಿ’ ಲೀಗ್ ಪಂದ್ಯದಲ್ಲಿ ಭಾರತ, ಆಸ್ಟ್ರೇಲಿಯಾ ತಂಡವನ್ನು 100 ರನ್ ಗಳಿಂದ ಮಣಿಸಿತ್ತು. ಕ್ವಾರ್ಟರ್ ಫೈನಲ್ ನಲ್ಲಿ ಬಾಂಗ್ಲಾದೇಶ ಹಾಗೂ ಸೆಮಿಫೈನಲ್ ನಲ್ಲಿ ಪಾಕಿಸ್ತಾನವನ್ನು ಬಗ್ಗು ಬಡಿದಿರುವ ಭಾರತ ಆತ್ಮವಿಶ್ವಾಸದಲ್ಲಿದೆ.

ನಾಯಕ ಪೃಥ್ವಿ ಶಾ, ಭಾರತದ 4ನೇ  ಅಂಡರ್-19 ವಿಶ್ವಕಪ್ ಟ್ರೋಫಿ ಎತ್ತಿಹಿಡಿಯಲಿದ್ದಾರೆಯೇ ಎಂಬುದು ಕುತೂಹಲ ಕೆರಳಿಸಿದೆ. ಮಹಮ್ಮದ್ ಕೈಫ್, ವಿರಾಟ್ ಕೊಹ್ಲಿ ಹಾಗೂ ಉನ್ಮುಕ್ತ್ ಚಂದ್ ಭಾರತದ ಪರವಾಗಿ ಕಿರಿಯರ ವಿಶ್ವಕಪ್ ಜಯಿಸಿದ ನಾಯಕರಾಗಿದ್ದಾರೆ. ಭಾರತ ಚಾಂಪಿಯನ್ ಆಗಲಿದೆ ಎಂದು ಮಾಜಿ ನಾಯಕ ಸೌರವ್ ಗಂಗೂಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published.