Belagavi : ಲಂಡನ್ ಅಲ್ಲ, ಕಿತ್ತೂರಲ್ಲೇ ಇದೆ ವೀರ ರಾಣಿ ಚನ್ನಮ್ಮಳ ಖಡ್ಗ ?

ಬೆಳಗಾವಿ : ವೀರ ರಾಣಿ ಚನ್ನಮ್ಮಳ ಖಡ್ಗ ವಿಚಾರ ಇದೀಗ ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದೆ. ಇಷ್ಟು ದಿನ ಲಂಡನ್ ಮ್ಯೂಸಿಯಂ ನಲ್ಲಿ ಇದೆ ಎನ್ನಲಾಗಿದ್ದ ರಾಣಿ ಚನ್ನಮ್ಮ ಹಾಗೂ ಸಂಗೊಳ್ಳಿ ರಾಯಣ್ಣನ ಖಡ್ಗ ಇದೀಗ ಕಿತ್ತೂರಿನಲ್ಲಿ ಇರೋದು ಬೆಳಕಿಗೆ ಬಂದಿದೆ. ಕಿತ್ತೂರು ಸಂಸ್ಥಾನದ ರಾಜಗುರು ಕಲ್ಮಠದಲ್ಲಿ ಇವೆ ಎನ್ನುವ ಅನುಮಾನ ವ್ಯಕ್ತವಾಗಿದೆ. ಮಠದಲ್ಲಿ ಪ್ರತಿ ವರ್ಷದ ಆಯುಧ ಪೂಜೆ ಸಂದರ್ಭದಲ್ಲಿ ಈ ಖಡ್ಗಳಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತಿದೆ. ಸಂಸ್ಥಾನದಲ್ಲಿ ಇರೋ ಎರಡು ಖಡ್ಗಗಳ ಬಗ್ಗೆ ಸಂಶೋಧನೆ ನಡೆಸಲು ನಿರ್ಧರಿಸಲಾಗಿದ್ದು, ಬಳಿಕವಷ್ಟೇ ಎಲ್ಲಾ ವಿಷಯ ಬಹಿರಂಗವಾಗಲಿದೆ.

Leave a Reply

Your email address will not be published.