ಎಷ್ಟು ಹಗುರವಾಗಿ ಹೇಳಿಬಿಟ್ಟಿರಿ ರೆಡ್ಡಿಯವರೇ…ಸುಮ್ನೆ ಚುಚ್ಚಿದರೂ ಹೋದದ್ದು ಪ್ರಾಣವಲ್ಲವೇ : BSY

ಬೆಂಗಳೂರು : ಸಂತೋಷ್‌ ಹತ್ಯೆ ವಿಚಾರ ಸಂಬಂಧ ಗುರುವಾರ ರಾಮಲಿಂಗಾರೆಡ್ಡಿ ನೀಡಿದ್ದ ಹೇಳಿಕೆಗೆ ಮಾಜಿ ಸಿಎಂ ಯಡಿಯೂರಪ್ಪ ಪ್ರತಿಕ್ರಿಯೆ ನೀಡಿದ್ದಾರೆ.
ಮೃತ ಸಂತೋಷ್‌ ಹತ್ಯೆ  ಕುರಿತು ರಾಮಲಿಂಗಾರೆಡ್ಡಿ ಅವರ ಹೇಳಿಕೆಗೆ ಪ್ರತಿಕ್ರಿಯಿ ಟ್ವೀಟ್‌ ಮಾಡಿರುವ ಬಿಎಸ್‌ವೈ, ಸಾಯಿಸಬೇಕು ಅಂತ ಇರಲಿಲ್ಲ, ಸುಮ್ಮನೆ ಚುಚ್ಚಿದ ಅಷ್ಟೇ ಎನ್ನುತ್ತೀರಲ್ಲ, ಎಷ್ಟು ಹಗುರವಾಗಿ ಹೇಳಿಬಿಟ್ಟಿರಿ ರಾಮಲಿಂಗಾರೆಡ್ಡಿಯವರೇ ? ಸುಮ್ಮನೆ ಚುಚ್ಚಿದರೂ ಹೋದದ್ದು ಪ್ರಾಣವೇ ಅಲ್ಲವೇ ? ಅಷ್ಟು ಕಡೆಯಾಯಿತ ಹಿಂದೂಗಳ ಪ್ರಾಣ. ಮುಗ್ಧ ಅಲ್ಪ ಸಂಖ್ಯಾತರ ಮೇಲಿನ ಪ್ರಕರಣವನ್ನು ಕೈಬಿಡಲು ನಿರ್ಧರಿಸಿದ್ದು, ಇಂಥಹವರನ್ನು ಬೆಂಬಲಿಸುವುದಕ್ಕಾಗಿಯೇ ಎಂದು ಪ್ರಶ್ನಿಸಿದ್ದಾರೆ.
ಅಲ್ಲದೇ ಸಂತೋಷ್‌ ಕೊಲೆ ಆರೋಪಿ ವಾಸಿಂ ತಂದೆಯ ಕುರಿತು ಟ್ವೀಟ್‌ ಮಾಡಿರುವ ಅವರು, ಬಿಜೆಪಿ ಕಾರ್ಯಕರ್ತ ಸಂತೋಷ್‌ ಹತ್ಯೆ ಮಾಡಿದ ವಾಸಿಂ ತಂದೆ ಷರೀಫ್‌, ಕಾಂಗ್ರೆಸ್‌ ಮುಖಂಡ. ಈ ಮೂಲಕ ಕಾಂಗ್ರೆಸ್‌ನ ಕ್ರೂರ ಮನಸ್ಥಿತಿ ಏನೆಂದು ತಿಳಿಯುತ್ತದೆ. ಇಂಥಾ ಗೂಂಡಾ ಸರ್ಕಾರದ ಕ್ರೌರ್ಯಕ್ಕೆ ಮಕ್ಕಳನ್ನು ಕಳೆದುಕೊಂಡ ತಂದೆ ತಾಯಿಯರ ಕಣ್ಣೀರು ನಿಮ್ಮನ್ನು ಸುಡದೆ ಬಿಡುವುದಿಲ್ಲ ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com