ನಾನೆಂದು ದೇಶದ್ರೋಹಕ್ಕೆ ಬೆಂಬಲ ನೀಡಲ್ಲ, ಜನರಿಗಾಗಿ ಒಳಿತನ್ನೇ ಮಾಡ್ತೇನೆ : ರಾಮಲಿಂಗಾರೆಡ್ಡಿ

ಬೆಂಗಳೂರು : ಸಂತೋಷ್‌ನನ್ನು ಸಾಯಿಸಬೇಕು ಅಂತ ಅಲ್ಲ. ಸುಮ್ಮನೆ ಚುಚ್ಚಿದ ಎಂಬ ಹೇಳಿಕೆ ಕುರಿತು ರಾಮಲಿಂಗಾರೆಡ್ಡಿ ಪ್ರತಿಕ್ರಿಯಿಸಿದ್ದಾರೆ. ಬಿಎಸ್‌ ಯಡಿಯೂರಪ್ಪ ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ಅಧಿಕಾರಿಗಳು ಹಾಗೂ ಪೊಲೀಸ್ ಕಮಿಷನರ್‌ ನನಗೆ ತಿಳಿಸಿದ ಹಾಗೆ ಅದನ್ನು ಮಾಧ್ಯಮಕ್ಕೆ ನಡೆದ ಘಟನೆಯನ್ನು ವಿವರಿಸಿದ್ದೆ. ಈ ವೇಳೆ ಸಂತೋಷ್‌ನನ್ನು ಕೊಲ್ಲಲು ಯಾವುದೇ ರೀತಿಯ ಮಾರಕಾಸ್ತ್ರಗಳನ್ನು ಬಳಸಿಲ್ಲ. ಸ್ಕೃೂ ಡ್ರೈವರ್‌ ಬಳಸಿ ಹತ್ಯೆ ಮಾಡಿರುವುದಾಗಿ ಹೇಳಿದ್ದೆ ಎಂದಿದ್ದಾರೆ.

ಅವರೆಲ್ಲರೂ ಸ್ನೇಹಿತರು. ಕಳೆದ ಮೂರು ತಿಂಗಳಿನಿಂದ ಅವರ ಮಧ್ಯೆ ಜಗಳ ನಡೆಯುತ್ತಿತ್ತು. ನಾನು ಎಂದಿಗೂ ದೇಶದ್ರೋಹದ ವಿಷ ಬೀಜ ಬಿತ್ತುವವನಲ್ಲ, ಅದಕ್ಕೆ ಬೆಂಬಲವನ್ನೂ ನೀಡುವುದಿಲ್ಲ. ನನಗೆ ರಾಜ್ಯದ ಜನರ ರಕ್ಷಣೆ ಮುಖ್ಯ. ಸಾವಿನಲ್ಲಿ ರಾಜಕೀಯ ಮಾಡುವುದಿಲ್ಲ. ಜನರಿಗಾಗಿ ನಾನೆಂದೂ ಒಳಿತನ್ನೇ ಬಯಸುತ್ತೇನೆ. ಯಾರದೇ ಪ್ರಾಣ ಹೋದರೂ ಆ ಮನೆಯವರ ನೋವನ್ನು ಯಾರಿಂದರೂ ತುಂಬಲು ಸಾಧ್ಯವಿಲ್ಲ. ಅಂಥಹದ್ದರಲ್ಲಿ ಹೇಳಿಕೆ ನೀಡುತ್ತಾ ಕುಟುಂಬಸ್ಥ ಮನಸ್ಸಿಗೆ ನೋವಂಟು ಮಾಡುವುದು ಸರಿಯಲ್ಲ ಎಂದಿದ್ದಾರೆ.

 

Leave a Reply

Your email address will not be published.