ಪದ್ಮಾವತ್‌ ಅಂತ ತಿಳ್ಕೊಂಡು ಭಾಗಮತಿ ಸಿನಿಮಾ ವಿರುದ್ದ ಪ್ರತಿಭಟನೆ ಮಾಡಿ ನಗೆಪಾಟಲಿಗೀಡಾದ ತಮಿಳರು…!!

ಚೆನ್ನೈ : ಎಲ್ಲೆಡೆ ಭಾರೀ ವಿರೋಧ ಎದುರಿಸಿ ಬಳಿಕ ಜನವರಿ 25ರಂದು ಬಿಡುಗಡೆಯಾಗಿದ್ದ ಪದ್ಮಾವತ್‌ ಸಿನಿಮಾಗೆ ಈಗಲೂ ಅಷ್ಟೇ ವಿರೋಧ ವ್ಯಕ್ತವಾಗುತ್ತಿದ್ದು, ಹಲವೆಡೆ ಪ್ರತಿಭಟನೆ ನಡೆಯುತ್ತಿದೆ. ಅಂತೆಯೇ ತಮಿಳುನಾಡಿನಲ್ಲೂ ಪದ್ಮಾವತ್‌ ಸಿನಿಮಾ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.

ತಮಿಳುನಾಡಿನಷ್ಟು ಸಾಕಷ್ಟು ಮಂದಿಗೆ ಹಿಂದಿಯನ್ನು ಓದಲು, ಬರೆಯಲು ಬರುವುದಿಲ್ಲ. ಅವರು ಕೇವಲ ತಮಿಳು ಭಾಷೆಯೊಂದಕ್ಕೇ ಅವಲಂಬಿತರಾಗಿದ್ದಾರೆ. ಇಂತಹ ಒಂದಷ್ಟು ಮಂದಿ ಪದ್ಮಾವತ್ ಸಿನಿಮಾ ವಿರುದ್ಧ ಚಿತ್ರಮಂದಿರದ ಬಳಿ ಪ್ರತಿಭಟನೆ ನಡೆಸಿದ್ದಾರೆ. ಆದರೆ ಆ ಚಿತ್ರಮಂದಿರದಲ್ಲಿ ಅನುಷ್ಕಾ ಶೆಟ್ಟಿ ಅಭಿನಯದ ಭಾಗಮತಿ ಸಿನಿಮಾ ಪ್ರದರ್ಶನವಾಗುತ್ತಿದ್ದು, ಭಾಗಮತಿ ಹಾಗೂ ಪದ್ಮಾವತ್‌ ಸಿನಿಮಾದ ಶೀರ್ಷಿಕೆ ಓದಲು ಬರದೆ ಪದ್ಮಾವತ್‌ ಬದಲು ಭಾಗಮತಿ ಸಿನಿಮಾ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.

ತಮಿಳಿಗೆ ಡಬ್ಬಿಂಗ್ ಆಗಿರುವ ಸಂಜಯ್‌ ಲೀಲಾ ಬನ್ಸಾಲಿ ಅವರ ಪದ್ಮಾವತ್‌ ಸಿನಿಮಾಗೆ ತಮಿಳುನಾಡಿನಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆದರೆ ತಮಿಳುನಾಡಿನಲ್ಲಿರುವ ಕೆಲ ಕರ್ಣಿ ಸೇನಾ ಕಾರ್ಯಕರ್ತರು ಪದ್ಮಾವತ್‌ ಬದಲು ಭಾಗಮತಿ ಸಿನಿಮಾ ಥಿಯೇಟರ್‌ ಎದುರು ಪ್ರತಿಭಟನೆ ನಡೆಸಿ ನಗೆಪಾಟಲಿಗೀಡಾಗಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com