ಲವ್ವರ್‌ನ ಕೈಹಿಡಿಯೋ ಕನಸಿನಲ್ಲಿದ್ದ ಯುವತಿ :ಆದ್ರೆ ಇಂಜೆಕ್ಷನ್‌ ನೀಡಿದ ಪೋಷಕರು ಮಾಡಿದ್ದೇನು?

ಜೈಪುರ : ಈಗಿನ ಕಾಲದಲ್ಲಿ ಪ್ರೀತಿ ಪ್ರೇಮ ಎಲ್ಲ ಸಾಮಾನ್ಯ. ಅದರಲ್ಲೂ ಮನೆಯವರನ್ನು ಒಪ್ಪಿಸಿ ಪ್ರೀತಿ ಮಾಡಿದ ವ್ಯಕ್ತಿಯನ್ನ ಮದುವೆಯಾಗುವುದು ಕಷ್ಟದ ಪರಿಸ್ಥಿತಿಯೇ ಸರಿ. ಆದರೆ ಜೈಪುರದಲ್ಲಿ ಪೋಷಕರು ತಮ್ಮ ಮಗಳು ಪ್ರೀತಿಸಿದವನ ಜೊತೆಯೇ ಮದುವೆ ಮಾಡಿಸುವುದಾಗಿ ಹೇಳಿ ಬಳಿಕ ಇಂಜೆಕ್ಷನ್‌ ನೀಡಿ ಬಲವಂತವಾಗಿ ವಯಸ್ಸಾದ ವ್ಯಕ್ತಿಯ ಜೊತೆ ಮದುವೆ ಮಾಡಿಸಿದ್ದಾರೆ.

ರಾಜಸ್ಥಾನದ ಕೈರುವಾಲ ಗ್ರಾಮದಲ್ಲಿ ಘಟನೆ ನಡೆದಿದೆ. ಯುವತಿ ತಾನು ಪ್ರೀತಿಸಿದವನ ಜೊತೆಯೇ ಮದುವೆಯಾಗುವುದಾಗಿ ನಿರ್ಧರಿಸಿದ್ದಳು. ಆದರೆ ಆಕೆಯ ಪೋಷಕರು ಮದುವೆಗೆ ನಿರಾಕರಿಸಿದ್ದರು. ಒಂದು ದಿನ ಯುವತಿ ಮನೆಯಲ್ಲಿ ಮಲಗಿರುವಾಗ ಆಕೆಯನ್ನು ಬೇರೆ ಗ್ರಾಮಕ್ಕೆ ಕರೆದುಕೊಂಡು ಹೋಗಿ ಬಲವಂತವಾಗಿ ಮದುವೆ ಮಾಡಿಸಿದ್ದಾರೆ.

ಯುವತಿ ನಿದ್ದೆ ಮಾಡುತ್ತಿದ್ದಾಗ ಆಕೆಯನ್ನು ಬೈಕ್‌ನಲ್ಲಿ ಕೂರಿಸಲಾಗಿದೆ. ಈ ವೇಳೆ ಆಕೆಗೆ ಎಚ್ಚರಾಗಿ ಕಿರುಚಾಡಿ ನೆಲದ ಮೇಲೆ ಉರುಳಾಡಿದ್ದಾಳೆ. ಆಕೆ ಕಿರುಚಿದರೆ ಜನ ಸೇರುತ್ತಾರೆ ಎಂಬ ಕಾರಣಕ್ಕೆ ಆಕೆಗೆ ಮೂರು ಇಂಜೆಕ್ಷನ್ ನೀಡಲಾಗಿದೆ. ಬಳಿಕ ಆಕೆಯನ್ನು ಎಳೆದುಕೊಂಡು ಹೋಗಿ  45 ವರ್ಷದ ವ್ಯಕ್ತಿ ಜೊತೆ ಮದುವೆ ಮಾಡಿಸಲಾಗಿದೆ. ಬಳಿಕ ಆಕೆಯನ್ನು ಕೋಣೆಯಲ್ಲಿ ಕೂಡಿ ಹಾಕಿದ್ದಾರೆ.

ಈ ವಿಚಾರ ಹೇಗೋ ತಹಶೀಲ್ದಾರ್‌ ಹಾಗೂ ಪೊಲೀಸರಿಗೆ ತಿಳಿದು ಸ್ಥಳಕ್ಕೆ ಬರುವ  ಮುಂಚೆಯೇ ಮದುವೆ ಮುಗಿದು ಹೋಗಿತ್ತು. ಸದ್ಯ ಯುವತಿಯ ಪೋಷಕರ ವಿರುದ್ದ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ನಡೆಸುತ್ತಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com