ಕಡಿಮೆಯಾಯ್ತು ಮೋದಿ ಅಲೆ : ರಾಜಸ್ಥಾನ ಉಪಚುನಾವಣೆಯಲ್ಲಿ ಗೆದ್ದು ಬೀಗಿದ ಕಾಂಗ್ರೆಸ್‌

ಜೈಪುರ : ಗುಜರಾತ್‌ ಹಾಗೂ ಹಿಮಾಚಲ ಪ್ರದೇಶ ವಿಧಾನ ಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಸಾಧಿಸಿದ್ದ ಬಿಜೆಪಿಗೆ ರಾಜಸ್ಥಾನದಲ್ಲಿ ಮುಖಭಂಗವಾಗಿದೆ. ರಾಜಸ್ಥಾನದಲ್ಲಿ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಸೋಲನುಭವಿಸಿದೆ.

ರಾಜಸ್ಥಾನದ ಎರಡು ಲೋಕಸಭಾ ಹಾಗೂ ಒಂದು ವಿಧಾನಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ನಡೆದಿತ್ತು. ಈ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಭಾರೀ ಅಂತರದ ಗೆಲುವು ಲಭಿಸಿದೆ. ಅಜ್ಮೀರ್‌ ಹಾಗೂ ಅಲ್ವಾರ್‌ ಲೋಕಸಭಾ ಕ್ಷೇತ್ರಗಳು ಹಾಗೂ ಮುದ್ಗಲ್‌ ವಿಧಾನ ಸಭಾ ಕ್ಷೇತ್ರದ ಸಂಸದರು, ಶಾಸಕರ ನಿಧನದ ಹಿನ್ನೆಲೆಯಲ್ಲಿ ಇಂದು ಚುನಾವಣೆ ನಡೆದಿತ್ತು.

 ಈ ಕುರಿತು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಪ್ರತಿಕ್ರಿಯಿಸಿದ್ದು, ಇದು ರಾಜಸ್ಥಾನ ಜನತೆಯ ಗೆಲುವು. ರಾಜ್ಯ ಜನ ಬಿಜೆಪಿಯನ್ನು ತಿರಸ್ಕರಿಸಿದ್ದಾರೆ. ನಿಜಕ್ಕೂ ರಾಜ್ಯದ ಜನರಿಗೆ ನಾವು ಆಭಾರಿಯಾಗಿರುವುದಾಗಿ ಹೇಳಿದ್ದಾರೆ.
ಇನ್ನು ಪಶ್ಚಿಮ ಬಂಗಾಳದ ಎರಡು ಕ್ಷೇತ್ರಗಳಲ್ಲಿ ನಡೆದ ಉಪ ಚುನಾವಣೆಯಲ್ಲಿ ಆಡಳಿತಾರೂಢ ಟಿಎಂಸಿ ಪಕ್ಷ ಜಯ ಗಳಿಸಿದೆ.

Leave a Reply

Your email address will not be published.