Twitter ತೊರೆಯಲಿದ್ದಾರಂತೆ ಅಮಿತಾಬ್‌ ಬಚ್ಚನ್‌….ಈ ಬಗ್ಗೆ ಶಾಕಿಂಗ್‌ ಉತ್ತರ ನೀಡಿದ ಬಿಗ್‌ ಬಿ !

ಸದಾ ಕ್ರಿಯಾಶೀಲರಾಗಿ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ಬಾಲಿವುಡ್‌ ಖ್ಯಾತ ನಟ ಅಮಿತಾಬ್‌ ಬಚ್ಚನ್‌ ಟ್ವಿಟರ್‌ ತೊರೆಯುತ್ತಾರಂತೆ. ಹೀಗಂತ ಸ್ವತಃ ಅಮಿತಾಬ್‌ ಬಚ್ಚನ್‌ ಹೇಳಿದ್ದಾರೆ.

ಹೌದು  ಟ್ವಿಟರ್‌ನಲ್ಲಿ 32.9 ಮಿಲಿಯನ್‌ ಫಾಲೋವರ್ಸ್‌ಗಳನ್ನು ಹೊಂದಿರುವ ಅಮಿತಾಬ್‌ ಬಚ್ಚನ್‌, ತಾವು ಟ್ವಿಟರ್‌ ತೊರೆಯುವ ಸಮಯ ಬಂದಿದೆ ಎಂದು ಹೇಳಿದ್ದಾರೆ. ಬಾಲಿವುಡ್‌ ನಟರಲ್ಲಿಯೇ ಅತಿ ಹೆಚ್ಚು ಫಾಲೋವರ್ಸ್‌ ಹೊಂದಿದ್ದ ಅಮಿತಾಬ್‌ ಅವರ ಫಾಲೋವರ್ಸ್‌ ಸಂಖ್ಯೆಯಲ್ಲಿ ಇಳಿಮುಥವಾಗುತ್ತಿರುವುದಕ್ಕೆ ಟ್ವಿಟರ್‌ ತೊರೆಯುವುದಾಗಿ ಹೇಳಿದ್ದಾರೆ.

ಆದರೆ ಇದೊಂದು ತಮಾಷೆಯ ಟ್ವೀಟ್‌ ಎನ್ನಲಾಗಿದ್ದು, ಅತ್ಯಧಿಕ ಫಾಲೋವರ್ಸ್‌ ಹೊಂದಿದ್ದ ಅಮಿತಾಬ್‌ ಅವರಿಗೆ ಸಮನಾಗಿ ಶಾರುಕ್ ಖಾನ್‌ ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ. ಅಮಿತಾಬ್‌ಗೆ ಶಾರುಕ್‌ ಠಕ್ಕರ್‌ ಕೊಡುತ್ತಿರುವ ಹಿನ್ನೆಲೆಯಲ್ಲಿ ಬಿಗ್‌ ಬಿ ತಮಾಷೆಗೆ ಈ ರೀತಿ ಟ್ವೀಟ್ ಮಾಡಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com