ಮದ್ವೆ ಕಾರ್ಡ್‌ ಕೊಡೋದಾಗಿ ಮನೆಗೆ ಬಂದ ಭೂಪ….ದಂಪತಿಗೆ ಮಾಡಿದ್ದೇನು…..?

ಹಾಸನ : ಅಣ್ಣನ ಮದುವೆ ಕಾರ್ಡ್‌ ನೀಡುವ ನೆಪದಲ್ಲಿ ತಾನು ಹಿಂದೆ ಕೆಲಸ ಮಾಡುತ್ತಿದ್ದ ಮಾಲೀಕರ ಮನೆಗೆ ತೆರಳಿದ್ದ ವ್ಯಕ್ತಿಯೊಬ್ಬ ದಂಪತಿಗೆ ಇರಿದು, ಮನೆ ದರೋಡೆ ಮಾಡಿರುವ ಘಟನೆ ಹಾಸನದ ಕುವೆಂಪುನಗರ ಬಡಾವಣೆಯಲ್ಲಿ ನಡೆದಿದೆ.

ಇರಿತಕ್ಕೊಳಗಾದವರ ನ್ನು ವಾಗೀಶ್‌ (61), ಸಾವಿತ್ರಿ (55) ಎಂದು ತಿಳಿದುಬಂದಿದೆ. ವಾಗೀಶ್‌ ಬಳಿ ಇಮ್ರಾನ್‌ ಎಂಬಾತ ಈ ಹಿಂದೆ ಕೆಲಸ ಮಾಡಿಕೊಂಡಿದ್ದ. ಇಂದು ಬೆಳಗ್ಗೆ ಇಮ್ರಾನ್‌ ತನ್ನ ಅಣ್ಣನ ಮದುವೆ ಕಾರ್ಡ್‌ ನೀಡಲು ವಾಗೀಶ್‌ ಮನೆಗೆ ಹೋಗಿದ್ದಾನೆ. ಈ ವೇಳೆ ಮನೆಯಲ್ಲಿದ್ದ ದಂಪತಿಗೆ ಚಾಕು ಇರಿದಿದ್ದು, 3 ಲಕ್ಷ ರೂ ಹಾಗೂ ಚಿನ್ನಾಭರಣವನ್ನು ದೋಚ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ.

ತೀವ್ರವಾಗಿ ಗಾಯಗೊಂಡಿದ್ದ ದಂಪತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿರುವುದಾಗಿ ವೈದ್ಯರು ಹೇಳಿದ್ದಾರೆ. ಪ್ರಕರಣ ಸಂಬಂಧ ಕುವೆಂಪು ನಗರ ಬಡಾವಣೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಲೆಮರೆಸಿಕೊಂಡಿರುವ ಇಮ್ರಾನ್‌ಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

 

Leave a Reply

Your email address will not be published.