ಇದು ರೈತಪರ, ಸಾಮಾನ್ಯನ ಪರ, ವ್ಯವಹಾರ ಪರ, ಅಭಿವೃದ್ಧಿ ಪರವಾದ ಬಜೆಟ್‌ : ಮೋದಿ

ದೆಹಲಿ : ವಿತ್ತ ಸಚಿವ ಅರುಣ್ ಜೇಟ್ಲಿ ಮಂಡಿಸಿರುವ ಬಜೆಟ್‌ ಎಲ್ಲಾ ವರ್ಗದವರಿಗೂ ಲಾಭದಾಯಕವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಬಜೆಟ್‌ ಮಂಡನೆಯಾದ ಬಳಿಕ ಮಾತನಾಡಿದ ಅವರು, ದೇಶದ ಅಭಿವೃದ್ಧಿ, ಜನರ ಅಭಿವೃದ್ಧಿ ನಮಗೆ ಮುಖ್ಯ. ಅದಕ್ಕೆ ತಕ್ಕಂತೆ, ಎಲ್ಲರಿಗೂ ಅನುಕೂಲವಾಗುವಂತೆ ಬಜೆಟ್ ಮಂಡಿಸಲಾಗಿದೆ. ಇದು ರೈತರಿಗೆ, ರೈತ ಮಹಿಳೆಯರಿಗೆ ಆದಾಯ ಹೆಚ್ಚಿಸಲು ಸಹಕಾರಿಯಾಗಲಿದೆ. ಇದು ರೈತ ಮಿತ್ರ, ಸಾಮಾನ್ಯ ಮಿತ್ರ, ವ್ಯವಹಾರ ಮಿತ್ರ ಹಾಗೂ ಅಭಿವೃದ್ಧಿ ಪರ ಬಜೆಟ್‌ ಎಂದಿದ್ದಾರೆ.

ಈ ಬಾರಿ ಮಂಡನೆಯಾಗಿರುವ ಬಜೆಟ್‌ನಿಂದ ಉದ್ಯಮ ವಲಯಕ್ಕೂ ಸಾಕಷ್ಟು ಲಾಭ ತಂದುಕೊಡಲಿದ್ದು, ಆರೋಗ್ಯ, ಸುರಕ್ಷತೆಯತ್ತ ಹೆಜ್ಜೆ ಇಟ್ಟಿರುವುದಾಗಿ ಹೇಳಿದ್ದಾರೆ. ರೈತರು ನಮ್ಮ ದೇಶದ ಅಭಿವೃದ್ಧಿಯ ಭಾಗವಾಗಿದ್ದಾರೆ. ತಮ್ಮ ಉತ್ಪನ್ನಗಳನ್ನು ನೀಡುವ ಮೂಲಕ ದೇಶದ ವಿಕಾಸಕ್ಕೆ ಕೊಡುಗೆ ನೀಡಿದ್ದಾರೆ. ಆದ್ದರಿಂದ ಅವರಿಗೆ ಅನುಕೂಲ ಮಾಡಿಕೊಡುವುದು ನಮ್ಮ ಜವಾಬ್ದಾರಿ. ಆ ಕಾರಣಕ್ಕಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿರುವುದಾಗಿ ಹೇಳಿದ್ದಾರೆ.

ಜೊತೆಗೆ ಇದು ದಲಿತ, ಪೀಡಿತ, ಶೋಷಿತ, ವಂಚಿತರಿಗೆ ಲಾಭ ತಂದುಕೊಡುವ ಬಜೆಟ್‌ ಎಂದಿದ್ದಾರೆ. ಗ್ರಾಮೀಣ ಭಾರತದಿಂದ ಆಯುಷ್ಮಾನ್ ಭಾರತದವರೆಗೆ ಡಿಜಿಟಲ್ ಇಂಡಿಯಾದಿಂದ ಸ್ಟಾರ್ಟ್‌ ಅಪ್‌ ಇಂಡಿಯಾದವರೆಗೆ ಈ ಬಜೆಟ್‌ ಕೋಟ್ಯಂತರ ಭಾರತೀಯರ ಆಸೆಗಳನ್ನು ಗಟ್ಟಿ ಮಾಡುವುದಾಗಿ ಹೇಳಿದ್ದಾರೆ.

 

 

Leave a Reply

Your email address will not be published.