ಪ್ರಧಾನಿ ಮೋದಿ ಸರ್ಕಾರದ ಕೇಂದ್ರ ಬಜೆಟ್‌ -2018 : ಹೈಲೈಟ್ಸ್‌ ಇಲ್ಲಿದೆ

ದೆಹಲಿ : ದೇಶದ ಜನತೆ ಕಾತುರದಿಂದ ಕಾಯುತ್ತಿದ್ದ ಕೇಂದ್ರ ಬಜೆಟ್‌ ಘೋಷಣೆಯಾಗಿದೆ. ಕೇಂದ್ರ ಸರ್ಕಾರದ ಐದನೇ ಹಾಗೂ ಕೊನೆಯ ಪೂರ್ಣ ಪ್ರಮಾಣದ ಬಜೆಟ್ ಇದಾಗಿದೆ. ಕೇಂದ್ರದ ಬಜೆಟ್‌‌ನಲ್ಲಿ ಆರೋಗ್ಯ, ಕೃಷಿ ಮತ್ತು ಶೈಕ್ಷಣಿಕ ವಲಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ವೈಯಕ್ತಿಕ ಆದಾಯ ತೆರಿಗೆಯಲ್ಲಿ ಯಾವುದೇ ತರಹದ ಬದಲಾವಣೆಗಳನ್ನು ಮಾಡಿಲ್ಲ.

2018-19ನೇ ಸಾಲಿನ ಕೇಂದ್ರ  ಬಜೆಟ್ ನ ಮುಖ್ಯಾಂಶಗಳು

*ಡಿಜಿಟಲ್ ಇಂಡಿಯಾಗಾಗಿ 3073 ಕೋಟಿ ರೂ ಅನುದಾನ

*ಎಲ್ಲಾ ವಿಮಾ ಕಂಪನಿಗಳನ್ನೂ ಒಗ್ಗೂಡಿಸಲಾಗುವುದು

*ಕಸ್ಟಮ್ಸ್ ಡ್ಯೂಟಿ ಹೆಚ್ಚಿಸಿದ ಕೇಂದ್ರ ಸರಕಾರ

*ವೈದ್ಯಕೀಯ ವಿಮೆ 30 ಸಾವಿರ ರೂ.ನಿಂದ 50 ಸಾವಿರ ರೂ. ಏರಿಕೆ .

*ವಿಮಾನ ನಿಲ್ದಾಣಗಳ ಸಂಖ್ಯೆ 5 ಪಟ್ಟು ಹೆಚ್ಚಳ

*5 ಲಕ್ಷ ಗ್ರಾಮಗಳಿಗೆ ವೈಫೈ ಸೌಲಭ್ಯ

*ಕ್ಷಯರೋಗಿಗಳಿಗೆ ತಿಂಗಳಿಗೆ 600 ರೂ ನೆರವು

*ನೇರ ತೆರಿಗೆ 12.6ರಷ್ಟು ಹೆಚ್ಚಳವಾಗಿದೆ

*ತೆರಿಗೆದಾರರ ಸಂಖ್ಯೆಯಲ್ಲಿ  19.25 ಲಕ್ಷ ಹೆಚ್ಚಳ.

*ಆದಾಯ ತೆರಿಗೆ ಮಿತಿಯಲ್ಲಿ ಬದಲಾವಣೆ ಇಲ್ಲ

*ವೈಯಕ್ತಿಕ  ಆದಾಯ ತೆರಿಗೆಯಲ್ಲಿ ಯಾವುದೇ ಬದಲಾವಣೆ ಇಲ್ಲ. ಹಿಂದಿನ  ಆದಾಯ ತೆರಿಗೆಯನ್ನು ಮುಂದುವರಿಸಲಾಗಿದೆ.

*2.50 ಲಕ್ಷ ರೂ.  ತನಕದ ಆದಾಯಕ್ಕೆ ಸದ್ಯ ಯಾವುದೇ ತೆರಿಗೆ ಇಲ್ಲ.

*2.50 ಲಕ್ಷ ರೂ- 5 ಲಕ್ಷ ರೂ . ತನಕ ಶೇ 5ರಷ್ಟು ತೆರಿಗೆ

*5 ರಿಂದ 10 ಲಕ್ಷ ರೂ. ಆದಾಯಕ್ಕೆ  ಶೇ 20ರಷ್ಟು ತೆರಿಗೆ.

*10ಲಕ್ಷ ರೂ.ಗಿಂತ ಮೇಲ್ಪಟ್ಟು ಶೇ 30ರಷ್ಟು ತೆರಿಗೆ

*ಹಿರಿಯ ನಾಗರಿಕರಿಗೆ ತೆರಿಗೆ ವಿನಾಯಿತಿ

*3 ಲಕ್ಷ ರೂ ತನಕ ತೆರಿಗೆ ಇಲ್ಲ

*3 ಲಕ್ಷ ರೂ- 5 ಲಕ್ಷ ರೂ ತೆರಿಗೆ

*5 ರಿಂದ 10 ಲಕ್ಷ ರೂ. ಆದಾಯಕ್ಕೆ  ಶೇ 20ರಷ್ಟು ತೆರಿಗೆ.

*10ಲಕ್ಷ ರೂ.ಗಿಂತ ಮೇಲ್ಪಟ್ಟು ಶೇ 30ರಷ್ಟು ತೆರಿಗೆ

* 40 ಸಾವಿರ ರೂ. ತನಕ ಚಿಕಿತ್ಸಾ ವೆಚ್ಚಕ್ಕೆ ತೆರಿಗೆ  ವಿನಾಯಿತಿ.  ಈವರೆಗೆ ಇದ್ದ ತೆರಿಗೆ ಮಿತಿ 15 ಸಾವಿರ ರೂ.

*1 ಲಕ್ಷ ಗ್ರಾಮ ಪಂಚಾಯತ್ ಗಳಿಗೆ ಹೈ ಸ್ಪೀಡ್ ಇಂಟರ್ ನೆಟ್

*ರೈಲು ಪ್ರಯಾಣಿಕರ ಸುರಕ್ಷತೆಗೆ ಮೊದಲ ಆದ್ಯತೆ ನೀಡಲಾಗುವುದು.

*ದೇಶದೆಲ್ಲೆಡೆ ಇರುವ ಬ್ರಾಡ್ ಗೇಜ್ ಮಾರ್ಗ ಉನ್ನತೀಕರಣ

*ಭಾರತ್ ಮಾಲಾ ಯೋಜನೆಯಡಿ 36 ಸಾವಿರ ಕಿಮೀ ಮೇಲ್ದರ್ಜೆಗೆ 1 ಲಕ್ಷ  48 ಸಾವಿರದ 500 ಕೋಟಿ ರೂ. ರೈಲ್ವೆಗೆ ಅನುದಾನ ನೀಡಲಾಗುವುದು.

*ಸಬ್ ಅರ್ಬನ್ ರೈಲು ಯೋಜನೆಗೆ ಒಟ್ಟು 40 ಸಾವಿರ ಕೋಟಿ ರೂ. ಬೆಂಗಳೂರು ಸಬ್ ಅರ್ಬನ್ ರೈಲು ಯೋಜನೆಗೆ 17 ಸಾವಿರ ಕೋಟಿ ರೂ.

*ವಡೋದರಾದಲ್ಲಿ ರೈಲ್ವೆ ವಿವಿ ಸ್ಥಾಪನೆ

*ಈ ವರ್ಷ ನೂತನವಾಗಿ  100 ಸ್ಮಾರ್ಟ್ ಸಿಟಿ ನಿರ್ಮಾಣದ ಯೋಜನೆ . ಸ್ಮಾರ್ಟ್ ಸಿಟಿಗೆ 2.4 ಲಕ್ಷ ಕೋಟಿ ಅನುದಾನ

*ಐಐಟಿ ಚೆನ್ನೈನಲ್ಲಿ 5 ಜಿ ಅಧ್ಯಯನ ಕೇಂದ್ರ

*ರಕ್ಷಣಾ ಇಲಾಖೆಯಲ್ಲಿ ಖಾಸಗಿ ಹೂಡಿಕೆ

* ರಕ್ಷಣಾ ಇಲಾಖೆಗೆ  2 ಶಸ್ತ್ರಾಸ್ತ್ರ ನಿರ್ಮಾಣ ಕಾರಿಡಾರ್

* ಎಲ್ಲ ವಿಮಾ ಕಂಪೆನಿಗಳನ್ನು ಒಗ್ಗೂಡಿಸಲಾಗುವುದು.

*ಪ್ರತಿ ಕುಟುಂಬಕ್ಕೂ 5 ಲಕ್ಷ ರೂ. ತನಕ  ಆರೋಗ್ಯ ವಿಮೆ.

*ರಾಷ್ಟ್ರಪತಿ, ಉಪರಾಷ್ಟ್ರ ಪತಿ, ರಾಜ್ಯಪಾಲರುಗಳ ವೇತನ ಹೆಚ್ಚಳ

*ರಾಷ್ಟ್ರಪತಿಗೆ 5 ಲಕ್ಷ ರೂ, ಉಪರಾಷ್ಟ್ರಪತಿಗೆ 4 ಲಕ್ಷ ರೂ ಮತ್ತು ರಾಜ್ಯಪಾಲರುಗಳಿಗೆ 3.50 ಲಕ್ಷ ರೂ. ವೇತನ ನಿಗದಿ. ಸಂಸದರ ವೇತನ 5 ವರ್ಷಗಳಿಗೊಮ್ಮೆ ಪರಿಷ್ಕರಣೆ

* ಉದ್ಯೋಗಾಕಾಂಕ್ಷಿಗಳಿಗೆ ಆಧಾರ್  ಮಾದರಿಯ  ನಂಬರ್

*ಜಿಎಸ್ ಟಿ ಈ ಬಾರಿ  12 ತಿಂಗಳ ಬದಲಿಗೆ 11 ತಿಂಗಳು

* 4 ವರ್ಷಗಳಿಂದ ಸ್ವಚ್ಛ  ಮತ್ತು ಪಾರದರ್ಶಕ ಆಡಳಿತ ನೀಡಲಾಗಿದೆ.

*ಬಡತನ ನಿರ್ಮೂಲನೆಗೆ ಆದ್ಯತೆ ನೀಡಲಾಗಿದೆ.

*ಆರ್ಥಿಕ ಸುಧಾರಣೆಗೆ ದಿಟ್ಟ ಹೆಜ್ಜೆ ಇರಿಸಲಾಗಿದೆ.

* ದೇಶದ ಜನತೆಗೆ ನೀಡಿದ ಭರವಸೆಯಂತೆ ನಡೆದುಕೊಂಡಿದ್ದೇವೆ.

*ಜನರಿಗೆ ಅಗ್ಗದ ದರದಲ್ಲಿ ಔಷಧಿಗಳು ದೊರೆಯುತ್ತಿದೆ.

* 2017-18ನೇ ಆಹಾರದ ಉತ್ಪಾದನೆಯಲ್ಲಿ ದೇಶ ದಾಖಲೆ ನಿರ್ಮಿಸಿದೆ.

*ಕೃಷಿಯನ್ನು ಲಾಭದಾಯಕವಾಗಿ ಮಾಡುವ  ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದೆ.

*ರೈತರು ಬೆಳೆದ ಬೆಳೆಗೆ ಉತ್ತಮ ಬೆಲೆ ಸಿಕ್ಕಿದೆ. ಹೆಚ್ಚಿನ ಬೆಲೆ ದೊರಕಿಸಿಕೊಡಲು ಪ್ರಯತ್ನ ನಡೆಸಲಾಗಿದೆ

*ರೈತರಿಗೆ  ಉತ್ಪನ್ನಗಳ ಬೆಲೆ ನಿಗದಿಗೆ ಸ್ವಾತಂತ್ರ್ಯ ನೀಡಲಾಗಿದೆ.

*ಕೃಷಿ ಉಗ್ರಾಣಗಳ ಸಂಗ್ರಹ ಸಾಮರ್ಥ್ಯವನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ.

*2022ರ ವೇಳೆಗೆ ರೈತರ ಆದಾಯವನ್ನು ದ್ವಿಗುಣಗೊಳಿಸಲು ಕ್ರಮ ಕೈಗೊಳ್ಳಲಾಗಿದೆ.

*ದೇಶದಲ್ಲಿ ನಿಜವಾದ ಅಚ್ಚೇದಿನ ಬರುತ್ತಿದೆ. ಎಲ್ಲ ಬೆಳೆಗಳಿಗೂ ಕನಿಷ್ಠ ಬೆಂಬಲ ಬೆಲೆ ನಿಗದಿಗೆ ಕ್ರಮ.

*ಈರುಳ್ಳಿ, ಅಲೂಗಡ್ಡೆ, ಟೊಮ್ಯಾಟೊ ಉತ್ಪಾದನೆಗೆ 500 ಕೋಟಿ ರೂ. ಅನುದಾನ ಒದಗಿಸಲಾಗಿದೆ.

ಕೃಷಿಕರು, ಹೈನುಗಾರರು, ಮೀನುಗಾರರಿಗೆ ಕಿಸಾನ್ ಕಾರ್ಡ್.

*ಎಪಿಎಂಸಿ ಉನ್ನತೀಕರಣಕ್ಕೆ 2,000 ಕೋಟಿ, ರೈತರ ಅನುಕೂಲಕ್ಕೆ 22 ಸಾವಿರ ಮಾರುಕಟ್ಟೆ

*ಅಹಾರ ಸಂಸ್ಕರಣೆ, ಖಾದಿ ಗ್ರಾಮೋದ್ಯಮಕ್ಕೆ 200 ಕೋಟಿ ಅನುದಾನ

*ಆಪರೇಷನ್ ಗ್ರೀನ್ ಗೆ 500 ಕೋಟಿ ರೂ ಮೀಸಲು

*2022 ವೇಳೆಗೆ ಮನೆ ಇಲ್ಲದವರಿಗೆ ಸ್ವಂತ ಮನೆ ನಿರ್ಮಾಣ. 33 ಲಕ್ಷ ಮನೆ ನಿರ್ಮಾಣ ಗುರಿ.

*ಉಜ್ವಲಾ ಯೋಜನೆಯಲ್ಲಿ 8 ಕೋಟಿ  ಗ್ಯಾಸ್ ಸಂಪರ್ಕ, ಸೌಭಾಗ್ಯ ಯೋಜನೆಯಲ್ಲಿ 4 ಕೋಟಿ ವಿದ್ಯುತ್ ಸಂಪರ್ಕ.

* ಪ್ರಧಾನ ಮಂತ್ರಿ  ಸೌಭಾಗ್ಯ ಯೋಜನೆಯಲ್ಲಿ ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್ ಸಂಪರ್ಕ ವ್ಯವಸ್ಥೆಗೆ 16,000 ಕೋಟಿ ರೂ.

*ಸ್ವಚ್ಛ ಭಾರತ ಯೋಜನೆಯಲ್ಲಿ ಮುಂದಿನ ಎರಡು ವರ್ಷಗಳಲ್ಲಿ 2 ಲಕ್ಷ ಶೌಚಾಲಯಗಳ ನಿರ್ಮಾಣ.

*20 ಲಕ್ಷ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಯೋಜನೆ ಗ್ರಾಮೀಣ ಪ್ರದೇಶದಲ್ಲಿ ಬ್ಲ್ಯಾಕ್ ಬೋರ್ಡ್ ಬದಲು ಡಿಜಿಟಲ್ ಬೋರ್ಡ್ ಗೆ ಕ್ರಮ

*ಬಿದಿರು ಬೆಳೆಯ ಅಭಿವೃಧ್ದಿಗೆ  1290 ಕೋಟಿ ರೂ.
* ಗ್ರಾಮಿಣ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ 14.34 ಲಕ್ಷ ಕೋಟಿ ರೂ. ಒದಗಿಸಲಾಗಿದೆ.

* ಈ ವರ್ಷ 70 ಲಕ್ಷ ಹೊಸ ಉದ್ಯೋಗಗಳ ಸೃಷ್ಠಿ

* ಮೂರು ಲೋಕಸಭಾ ವ್ಯಾಪ್ತಿಗೊಳಪಟ್ಟು 1 ಮೆಡಿಕಲ್ ಕಾಲೇಜು ಸ್ಥಾಪನೆ, 24 ಮೆಡಿಕಲ್ ಕಾಲೇಜು ಆಸ್ಪತ್ರೆ ಆರಂಭಕ್ಕೆ ಕ್ರಮ

* ಪರಿಶಿಷ್ಟ ಜಾತಿ  ಕಲ್ಯಾಣಕ್ಕಾಗಿ 56, 619 ಕೋಟಿ ರೂ. ಮತ್ತು ಪರಿಶಿಷ್ಟ ಪಂಗಡದ ಅಭಿವೃದ್ಧಿಗೆ 39,135 ಕೋಟಿ ರೂ

* ದಿಲ್ಲಿ, ಹರ್ಯಾಣ, ಪಂಜಾಬ್, ಉತ್ತರ ಪ್ರದೇಶದಲ್ಲಿ ಮಾಲಿನ್ಯ ಕಡಿಮೆ ಮಾಡಲು ವಿಶೇಷ ಯೋಜನೆಗಳನ್ನು ಆರಂಭಿಸಲಾಗುವುದು.

*ಪ್ರಧಾನ ಮಂತ್ರಿ ಮುದ್ರಾ ಯೋಜನೆಯಲ್ಲಿ 3 ಲಕ್ಷ ಕೋಟಿ ರೂ.  ಒದಗಿಸಲಾಗುವುದು.

Leave a Reply

Your email address will not be published.