ದೀಪಿಕಾ ತಲೆಗೆ ಬೆಲೆ ಕಟ್ಟಿದ್ದ ಸೂರಜ್‌ ಪಾಲ್‌ : BJP ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ

ದೆಹಲಿ : ಪದ್ಮಾವತ್‌ ಸಿನಿಮಾದಲ್ಲಿ ಅಭಿನಯಿಸಿದ್ದ ದೀಪಿಕಾ ತಲೆಗೆ ಬೆಲೆ ಕಟ್ಟಿದ್ದ ಹರಿಯಾಣದ ಬಿಜೆಪಿ ನಾಯಕ ಸೂರಜ್‌ ಪಾಲ್‌, ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.

ಪದ್ಮಾವತ್‌ ಸಿನಿಮಾ ವಿರೋಧಿ ಹಿಂಸಾಚಾರದಲ್ಲಿ ಭಾಗಿಯಾಗಿದ್ದಾರೆಂದು ಸೂರಜ್‌ಪಾಲ್‌ ಅವರನ್ನು ಜನವರಿ 25ರಂದು ಬಂಧಿಸಲಾಗಿತ್ತು. ಬಳಿಕ ನ್ಯಾಯಾಲಯವು ಇವರಿಗೆ ನಾಲ್ಕು ದಿನಗಳ ನ್ಯಾಯಾಂಗ ಬಂಧನ ಶಿಕ್ಷೆ ವಿಧಿಸಿತ್ತು. ಜೈಲಿನಿಂದ ಬಂದ ಬಳಿಕ ಸೂರಜ್‌ ಪಾಲ್‌ ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.

ಪದ್ಮಾವತ್ ಸಿನಿಮಾ ಬಿಡುಗಡೆಗೆ ಸುಪ್ರೀಂಕೋರ್ಟ್ ಅವಕಾಶ ನೀಡಿದ್ದು ನನಗೆ ನೋವುಂಟಾಗಿದೆ. ಸಿನಿಮಾದಲ್ಲಿ ರಾಣಿ ಪದ್ಮಾವತಿಯನ್ನು ಅವಮಾನ ಮಾಡಿದ್ದಾರೆ. ಅಂತಹ ಸಿನಿಮಾ ಬಿಡುಗಡೆಯಾಗಬಾರದಿತ್ತು. ಇದರಿಂದ ರಜಪೂತರ ಭಾವನೆಗಳಿಗೆ ಧಕ್ಕೆಯುಂಟಾಗಿದೆ. ಕೇಂದ್ರ ಸರ್ಕಾರ ಹಾಗೂ ಹರಿಯಾಣ ಸರ್ಕಾರ, ಪದ್ಮಾವತ್‌ ಬಿಡುಗಡೆಗೆ ನಡೆಸಿದ ಹೋರಾಟವನ್ನು ಉಗ್ರ ಚಟುವಟಿಕೆ ಎಂದಿದ್ದು ಆಶ್ಚರ್ಯ ಮೂಡಿಸಿದೆ. ಇದರಿಂದಾಗಿ ನೊಂದು ಬಿಜೆಪಿಯಿಂದ ದೂರ ಹೋಗುತ್ತಿದ್ದೇನೆ. ಈಗಾಗಲೆ ಹರಿಯಾಣ ಸಿಎಂ ಬರಾಲಾ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿರುವುದಾಗಿ ಹೇಳಿದ್ದಾರೆ.

Leave a Reply

Your email address will not be published.