Cricket : IND vs SA ಮೊದಲ ಏಕದಿನ ಪಂದ್ಯ : ಶುಭಾರಂಭ ಮಾಡುವುದೇ ಕೊಹ್ಲಿ ಪಡೆ..?

ಡರ್ಬನ್ ನ ಕಿಂಗ್ಸ್ ಮೇಡ್ ಮೈದಾನದಲ್ಲಿ ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವೆ ಮೊದಲ ಏಕದಿನ ಪಂದ್ಯ ನಡೆಯಲಿದೆ. ಜೋಹಾನೆಸ್ಬರ್ಗ್ ನಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯವನ್ನು 63 ರನ್ ಗಳಿಂದ ಜಯಿಸಿದರುವ ಭಾರತ ಏಕದಿನ ಸರಣಿಯಲ್ಲಿ ಶುಭಾರಂಭ ಮಾಡುವ ಉದ್ದೇಶ ಹೊಂದಿದೆ.

ಭಾರತ ಇದುವರೆಗೆ ದಕ್ಷಿಣ ಆಫ್ರಿಕಾ ನೆಲದಲ್ಲಿ ಒಮ್ಮೆಯೂ ಏಕದಿನ ಸರಣಿಯನ್ನು ಜಯಿಸಿಲ್ಲ. 2013/14 ರಲ್ಲಿ ಪ್ರವಾಸ ಕೈಗೊಂಡಾಗ 0-2 ರಿಂದ ವೈಫಲ್ಯ ಅನುಭವಿಸಿತ್ತು. ಐಸಿಸಿ ಏಕದಿನ ತಂಡಗಳ ರ್ಯಾಂಕಿಂಗ್ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿರುವ ಕೊಹ್ಲಿ ಪಡೆ ದ.ಆಫ್ರಿಕಾ ನೆಲದಲ್ಲಿ ಮೊದಲ ಏಕದಿನ ಸರಣಿ ಜಯ ದಾಖಲಿಸುವ ತವಕದಲ್ಲಿದೆ.

ದಕ್ಷಿಣ ಆಫ್ರಿಕಾದಲ್ಲಿ ಉಭಯ ತಂಡಗಳು ಇದುವರೆಗೆ 28 ಏಕದಿನ ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ದ.ಆಫ್ರಿಕಾ 21 ರಲ್ಲಿ ಗೆಲುವು ಸಾಧಿಸಿದ್ದು, ಭಾರತ 5 ಪಂದ್ಯಗಳನ್ನು ಜಯಿಸಿದೆ.

Leave a Reply

Your email address will not be published.