ಭಾರತದಲ್ಲಿ BJP ಇರೋವರೆಗೂ ದೇಶ ಉದ್ಧಾರ ಆಗಲ್ಲ : ಬಸವರಾಜ ಹೊರಟ್ಟಿ

ಧಾರವಾಡ : ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ವ್ಯಾಪಾರಿ ಸರ್ಕಾರ ಬಿಜೆಪಿ‌ಯವರು ಏನಿದ್ದರೂ ಬುಸಿನೆಸ್ ನೋಡ್ತಾರೆ. ಬರೀ ತೆರಿಗೆ ಹಾಕುವುದೇ ದೊಡ್ಡ ಕೆಲಸ ಅಂತ ತಿಳಿದುಕೊಂಡಿದ್ದಾರೆ. ಅವರು ಎಲ್ಲರಿಗೂ ತೆರಿಗೆ ಹಾಕುವ ಕೆಲಸದಲ್ಲಿ ನಿರತರಾಗಿದ್ದಾರೆ ಎಂದು ಧಾರವಾಡದಲ್ಲಿ ಮಾಜಿ ಸಚಿವ ಬಸವರಾಜ ಹೊರಟ್ಟಿ ವಾಗ್ದಾಳಿ ನಡೆಸಿದ್ದಾರೆ.

‘ ಅವರಿಗೆ ಶ್ರೀಮಂತ ವ್ಯಾಪಾರಸ್ಥರ ಬಗ್ಗೆ ಮಾತ್ರ ಕಾಳಜಿಯಿದೆ. ರೈತರ ಬಗ್ಗೆಯಾಗಲಿ, ಜನ ಸಾಮಾನ್ಯರ ಬಗ್ಗೆಯಾಗಲಿ ಕಾಳಜಿ ಇಲ್ಲ. ಅವರು ಇನ್ನೂ ಗುಜರಾತ್ನಲ್ಲಿಯೇ ಇದ್ದಾರೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವ ಸರ್ಕಾರವಲ್ಲ. ಅವರಿಂದ ದೇಶಕ್ಕೆ ಒಳ್ಳೇಯದನ್ನು ನಿರೀಕ್ಷೆ ಮಾಡಲ್ಲ ‘ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

‘ ಇವತ್ತಿನ ಕೇಂದ್ರ ಬಜೆಟ್ ಒಂದೂವರೆ ಗಂಟೆಗಳ ಕಾಲ ನೋಡಿ ಬೇಸತ್ತಿದ್ದೇನೆ. ಇವರ ಬಜೆಟ್ನಲ್ಲಿ ಅಂತಹ ಮಹತ್ವದ ಘೋಷಣೆಗಳಿಲ್ಲ. ಡೀಸೆಲ್ ಬೆಲೆಯಿಂದ ನಾವೂ ಕೂಡ ತೊಂದರೆ ಅನುಭವಿಸಿದ್ದೇವೆ. ಇವರದ್ದು ಕೇವಲ ಭರವಸೆಗಳ ಸರ್ಕಾರ. ದೊಡ್ಡ ದೊಡ್ಡ ಭಾಷಣ ನೋಡಬೇಕು. ನೋಟ್ ಬ್ಯಾನ್, ಜಿಎಸ್ಟಿಯಿಂದ ಈ ದೇಶದ ಮೇಲೆ ಗಂಭೀರ ಆರ್ಥಿಕ ಪರಿಣಾಮ ಬೀರಿದೆ. ದೇಶಕ್ಕೆ ಇವರು ಏನು ಮಾಡ್ತಾರೆ ಎಂದು ಹೊರಟ್ಟಿ ಪ್ರಶ್ನಿಸಿದ್ದಾರೆ.

ಇಂದು ಶಿಕ್ಷಣ ಹಾಗೂ ಆರೋಗ್ಯಕ್ಕೂ ಸೆಸ್ ಹಾಕುವ ಪರಿಸ್ಥಿತಿ ಬಂಧಿರುವುದು ಸರಿಯಲ್ಲ. ಇಂತಹ ಪರಿಸ್ಥಿತಿ ಯಾವ ದೇಶದಲ್ಲೂ ಇಲ್ಲ. ಶಿಕ್ಷಣಕ್ಕೆ ಹಾಗೂ ಆರೋಗ್ಯಕ್ಕೆ ತೆರಿಗೆ ಹಾಕಿದರೆ ಅವು ಕೂಡ ವಾಣಿಜ್ಯೀಕರಣಗೊಳ್ಳಲಿವೆ. ಅವರದ್ದು ಏನಿದ್ದರೂ ಅಂಬಾನಿ ಅವರಿಗೆ ಸಹಾಯ ಮಾಡುವುದೇ ಹೊರತು ಜನ ಸಾಮಾನ್ಯರ ಬಗ್ಗೆಯಾಗಲಿ, ರೈತರ ಬಗ್ಗೆಯಾಗಲಿ ಕಾಳಜಿ ಇಲ್ಲ. ಬಿಜೆಪಿ ಈ ದೇಶದಲ್ಲಿರುವವರೆಗೂ ಈ ದೇಶ ಉದ್ಧಾರ ಆಗಲ್ಲ.

ಕೇಂದ್ರ ಸರ್ಕಾರದ ವಿರುದ್ಧ ಬಸವರಾಜ ಹೊರಟ್ಟಿ ಗುಡುಗು.

Leave a Reply

Your email address will not be published.

Social Media Auto Publish Powered By : XYZScripts.com