ಸತ್ತವರನ್ನೆಲ್ಲ BJP ತನ್ನ ಪಕ್ಷಕ್ಕೆ ಸೇರಿಸಿಕೊಳ್ಳುತ್ತಿದೆ : ರಾಮಲಿಂಗಾರೆಡ್ಡಿ

ಬೆಂಗಳೂರು : ರಾಜ್ಯದಲ್ಲಿ ಬಿಜೆಪಿಯವರ ಹೊಸ ಸಂಪ್ರದಾಯ ಸೃಷ್ಠಿಯಾಗುತ್ತಿದೆ. ಸತ್ತವರನ್ನೆಲ್ಲ ಬಿಜೆಪಿ ತನ್ನ ಪಕ್ಷಕ್ಕೆ ಸೇರಿಸಿಕೊಳ್ಳುತ್ತಿದೆ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಅಣಕವಾಡಿದ್ದಾರೆ.

ಬಿಜೆಪಿ ಕಾರ್ಯಕರ್ತ ಸಂತೋಶ್‌ ಹತ್ಯೆ ಪ್ರಕರಣ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂತೋಷ್‌ ಬಿಜೆಪಿ ಕಾರ್ಯಕರ್ತನೂ ಅಲ್ಲ, ಹಿಂದೂ ಸಂಘಟನೆಯವನೂ ಅಲ್ಲ. ಸುಮ್ಮನೆ ಬಿಜೆಪಿಯವರು ಕೋಮು ದಳ್ಳುರಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಸಂತೋಷ್‌ ವಾಸಿಂ ಇಬ್ಬರೂ ಸ್ನೇಹಿತರು. ನಿನ್ನೆ ರಾತ್ರಿ ಯಾವುದೇ ವಿವಾದಕ್ಕೆ ಇಬ್ಬರ ಮಧ್ಯೆ ಜಗಳವಾಗಿ ವಾಸಿ ತನ್ನ ಬಳಿ ಇದ್ದ ಸ್ಕೃೂ ಡ್ರೈವರ್‌ನಿಂದ ಚುಚ್ಚಿದ್ದಾನೆ. ಆದರೆ ಸಂತೋಷ್‌ನನ್ನು ಕೊಲೆ ಮಾಡುವ ಉದ್ದೇಶ ಆತನದ್ದಾಗಿರಲಿಲ್ಲ ಎಂದಿದ್ದು, ಇದೇ ವೇಳೆ ಸಂತೋಶ್‌ಕುಟುಂಬಕ್ಕೆ 10 ಲಕ್ಷ ರೂ ಪರಿಹಾರ ಘೋಷಿಸಿದ್ದಾರೆ.

ಯಾರೇ ಸತ್ತರೂ ಬಿಜೆಪಿಯವರು ಇವನು ನಮ್ಮ ಪಕ್ಷದ ಕಾರ್ಯಕರ್ತ ಎನ್ನುತ್ತಾರೆ. ಸತ್ತ ಮೇಲೆ ಇವರು ಜನರನ್ನು ಇವರು ಪಕ್ಷಕ್ಕೆ ಸೇರಿಸಿಕೊಳ್ಳುತ್ತಾರೆ. ಸತ್ತವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಹೊಸ ಸಂಪ್ರದಾಯವನ್ನು ಬಿಜೆಪಿ ಹುಟ್ಟು ಹಾಕಿರುವುದಾಗಿ ವ್ಯಂಗ್ಯ ಮಾಡಿದ್ದಾರೆ.

ರಾಜ್ಯದಲ್ಲಿ 23 ಹಿಂದೂ ಸಂಘಟನೆಯ ಕಾರ್ಯಕರ್ತರನ್ನು ಹತ್ಯೆ ಮಾಡಿರುವುದಾಗಿ ಬಿಜೆಪಿ ಹೇಳುತ್ತದೆ. ಆದರೆ ನಡೆದಿದ್ದು ಅದಲ್ಲ ಕೋಮುಗಲಭೆಗೆ ಬಲಿಯಾದವರ ಸಂಖ್ಯೆ9 ಮಾತ್ರ. ಇನ್ನುಳಿದವೆಲ್ಲ ಬೇರೆ ಬೇರೆ ಕಾರಣಕ್ಕೆ ನಡೆದ ಕೊಲೆಗಳು. ಇದರ ಸಂಪೂರ್ಣ ಮಾಹಿತಿ ಸರ್ಕಾರದ ಬಳಿ ಇರುವುದಾಗಿ ಹೇಳಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com