ಮೋದಿ ಸರ್ಕಾರದವರು ಪುಂಗಿ ಗಿರಾಕಿಗಳು : ಬಜೆಟ್‌ ಬಗ್ಗೆ ವ್ಯಂಗ್ಯ ಮಾಡಿದ CM

ಬೆಂಗಳೂರು : ಕೇಂದ್ರ ಬಜೆಟ್ ಗೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ. ಕೇಂದ್ರ ಸರ್ಕಾರದ ಈ ಬಜೆಟ್‌ ವಿಜನ್ ಲೆಸ್, ಡೈರೆಕ್ಷನ್ ಲೆಸ್ ಬಜೆಟ್ ಎಂದು ಸಿಎಂ ವ್ಯಂಗ್ಯ ಮಾಡಿದ್ದು, ಈ ಬಜೆಟ್‌ಗೆ ಗುರಿ ಹಾಗೂ ಉದ್ದೇಶವಿಲ್ಲ . ಸುಮ್ಮನೆ ಭರವಸೆ ನೀಡಿರುವುದಾಗಿ ಹೇಳಿದ್ದಾರೆ.

ರೈತರ ಅಲ್ಪಾವದಿ ಸಾಲ ಮನ್ನಾ ಮಾಡುತ್ತಾರೆ ಎಂಬ ನಿರೀಕ್ಷೆ ಇತ್ತು. ಸಾಲ ಮನ್ನಾ ನಿರೀಕ್ಷೆ ಸಂಪೂರ್ಣ ಹುಸಿಯಾಗಿದೆ. ಮನಮೋಹನ್‌ಸಿಂಗ್‌ ಈ ಹಿಂದೆ ಬಜೆಟ್‌ನಲ್ಲಿ ಸಾಲ ಮನ್ನಾ ಮಾಡಿದ್ದರು. ಕೃಷಿಗೆ ಒತ್ತು ನೀಡುವುದು ಕೇವಲ ಘೋಷಣೆಯಷ್ಟೇ. ಕೃಷಿಗೆ ಸ್ವಾಮಿನಾಥನ್ ವರದಿ ಜಾರಿ ಸಮರ್ಪಕ ಅನುಷ್ಠಾನವಾಗಿಲ್ಲ. ಕೃಷಿ ಬೆಳೆಗಳ ಎಂಎಸ್ ಡಿ ಜಾರಿಯಾಗಿಲ್ಲ. ಘೋಷಿಸಿರುವ ಎಂಎಸ್ ಡಿ ರೈತರ ನಿರೀಕ್ಷೆಗೆ ತಕ್ಕಂತ್ತಿಲ್ಲ. ಮಾರುಕಟ್ಟೆ, ಕಾಸ್ಟ್ ಆಫ್ ಪ್ರೊಡಕ್ಟನ್ನು ಗಮನದಲ್ಲಿಟ್ಟುಕೊಂಡು ಮಾಡಿಲ್ಲ. ರಾಜ್ಯ ಸರ್ಕಾರದ ಮೇಲೆ ಬೆರಳು ತೋರಿಸಿ ಕೇಂದ್ರ ಸುಮ್ಮನೆ ಕುಳಿತಿದೆ. ಉದ್ಯೋಗ ಸೃಷ್ಟಿ ಬಗ್ಗೆ ಬಜೆಟ್ ನಲ್ಲಿ ಯಾವುದೇ ಅಂಶವಿಲ್ಲ. ಆರೋಗ್ಯಕ್ಕೆ ಹೆಚ್ಚು ಒತ್ತು ನೀಡಿದ್ದೇವೆ ಅಂತಾ ಹೇಳಿದೆ. ಆದ್ರೆ ಅದು ಇದೂವರೆಗೂ ಜಾರಿಯಾಗಿಲ್ಲ. ಇದು ಕನ್ನಡಿಯೊಳಗಿನ ಗಂಟೇ ಸರಿ ಎಂದಿದ್ದಾರೆ.

ಮುಂದಿನ ವರ್ಷ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಬಜೆಟ್ ಮಂಡಿಸಿದ್ದಾರೆ. 2022ರ ಒಳಗೆ ಎಲ್ಲರಿಗೂ ಮನೆ ಕಟ್ಟುತೇವೆ ಎನ್ನುತ್ತಾರೆ. ಆದರೆ ಅದಕ್ಕೆ ಹಣ ಇಟ್ಟಿಲ್ಲ. ಬೆಂಗಳೂರು ಸಬ್‌ ಅರ್ಬನ್‌ ರೈಲಿಗೆ ಅನುದಾನ ನೀಡಿದ್ದಾರೆ.ಆದರೆ ಆ ಬಗ್ಗೆ ನಾವಾಗಲೇ ಕ್ಯಾಬಿನೆಟ್‌ನಲ್ಲಿ ತೀರ್ಮಾನ ಮಾಡಿದ್ದೇವೆ. ಇವರು ಬರೀ ಪುಂಗಿ ಬಿಡುತ್ತಾರೆ. ಇವರು ಪುಂಗಿ ಗಿರಾಕಿಗಳು. ಅಚ್ಛೇದಿನ್‌ ಕಭೀ ನಹಿ ಆಯೇಗಾ ಎಂದಿದ್ದಾರೆ.

 

Leave a Reply

Your email address will not be published.