ಯಾರಾದ್ರು ಅಪಘಾತದಲ್ಲಿ ಸತ್ತರೂ ಅವರದ್ದು ಕೊಲೆ ಅಂತಾರೆ ಈ ಬಿಜೆಪಿಯವ್ರು : G. ಪರಮೇಶ್ವರ್‌

ಬೆಂಗಳೂರು : ಬೆಂಗಳೂರು ನಗರದಲ್ಲಿ ರಾತ್ರಿ ನಡೆದ ಸಂತೋಷ ಹತ್ಯೆ ಕುರಿತಂತೆ ಬೆಳಗಾವಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ ಪ್ರತಿಕ್ರಿಯೆ ನೀಡಿದ್ದಾರೆ ಸಂತೋಷ ಹತ್ಯೆ ಯಾವ ಉದ್ದೇಶಕ್ಕೆ ಹತ್ಯೆಯಾಗಿದೆ ಗೊತ್ತಿಲ್ಲ ಆದರೆ ಯಾರೆ ಹತ್ಯೆ ಮಾಡಿರಲಿ ಅವರನ್ನು ಶೀಘ್ರದಲ್ಲೇ ಹಿಡಿದು ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳಬೇಕೆಂದು ಗೃಹ ಸಚಿವರಿಗೆ, ಪೊಲೀಸ್ ಇಲಾಖೆಗೆ ಒತ್ತಾಯ ಮಾಡ್ತಿನಿ.

ಚುನಾವಣೆ ಬರ್ತಾಯಿದೆ ಅಂತ ಪ್ರತಾಪ್ ಸಿಂಹ ಪ್ರತಿಯೊಂದರಲ್ಲೂ ರಾಜಕೀಯ ಬೇರೆಸ್ತಿದಾರೆ ಗೋ ಯಜ್ಞ ಮಾಡ್ತಿನಿ ಅಂತ ಹೇಳ್ತಿದಾರೆ. ಈ ಹಿಂದೆ ನಾಲ್ಕು ವರ್ಷದಲ್ಲಿ ಯಾಕೆ ಮಾಡಲಿಲ್ಲ.
ಬಿಜಿಪಿ ಅವರಿಗೆ ಈ ಚುನಾವಣೆಯಲ್ಲಿ ಸೋಲಿನ ಭಯ ಶುರುವಾಗಿದೆ. ಅದಕ್ಕೆ ಯಾರಾದ್ರು ಅಪಘಾತದಲ್ಲಿ ಸತ್ತರೂ ಅವರನ್ನ ಮರ್ಡರ್ ಮಾಡಿದ್ರು ಅಂತ ಹೇಳ್ತಾರೆ. ಸಾಯದೇ ಇದ್ರು ಕೂಡ ಅವನು ಇನ್ನು ಬದುಕಿದ್ರು ಕೂಡ ಅವನನ್ನ ಸಾಯಿಸಿದ್ರು ಅಂತ ಹೇಳ್ತಾರೆ ೨೩ ಜನರನ್ನ ಕೊಂದು ಬಿಟ್ಟಿದ್ದಾರೆ ಅಂತ ಹೇಳ್ತಾರೆ ಅವರು ಯಾವ ರೀತಿ ಸತ್ತಿದ್ದಾರೆ ಅಂತ ನಮ್ಮ ಹತ್ರ ಪ್ರತಿಯೊಂದು ಕೇಸಿನಲ್ಲೂ ಕೂಡ ಮಾಹಿತಿ ಇದೆ ಎಂದರು…

Leave a Reply

Your email address will not be published.

Social Media Auto Publish Powered By : XYZScripts.com