India Open Badminton : ಎರಡನೇ ಸುತ್ತಿಗೆ ಸೈನಾ, ಸಿಂಧು ಪ್ರವೇಶ

ಭಾರತದ ಬ್ಯಾಡ್ಮಿಂಟನ್ ತಾರೆಯರಾದ ಸೈನಾ ನೆಹ್ವಾಲ್ ಹಾಗೂ ಪಿ.ವಿ ಸಿಂಧು ಇಂಡಿಯಾ ಓಪನ್ ಬ್ಯಾಡ್ಮಿಂಟನ್ ಸೂಪರ್ 500 ಟೂರ್ನಮೆಂಟಿನ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಎರಡನೇ ಸುತ್ತನ್ನು ಪ್ರವೇಶಿಸಿದ್ದಾರೆ.

ಟೂರ್ನಿಯ ಮೊದಲ ಪಂದ್ಯದಲ್ಲಿ ಸೈನಾ ನೆಹ್ವಾಲ್, ಡೆನ್ಮಾರ್ಕಿನ ಸೋಫಿ ಹಾಲ್ಮ್ಬೊದಹ್ಲ್ ಅವರನ್ನು 21-15, 21-9 ಪಾಯಿಂಟ್ ಗಳಿಂದ ಮಣಿಸಿ ಶುಭಾರಂಭ ಮಾಡಿದ್ದಾರೆ. ಲಂಡನ್ ಓಲಿಂಪಿಕ್ ರಜತ ಪದಕ ವಿಜೇತೆಯಾಗಿರುವ ಪಿ.ವಿ ಸಿಂಧು ಮತ್ತೋರ್ವ ಡೆನ್ಮಾರ್ಕಿನ ಆಟಗಾರ್ತಿ ನಟಾಲಿಯಾ ಅವರನ್ನು  21-10, 21-13 ಪಾಯಿಂಟ್ ಗಳಿಂ ಸೋಲಿಸಿದ್ದಾರೆ.

ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಭಾರತದ ಎಚ್. ಎಸ್ ಪ್ರಣಯ್, ಭಾರತದವರೇ ಆದ ಶ್ರೇಯಾಂಶ್ ಜೈಸ್ವಾಲ್ ಅವರ ವಿರುದ್ಧ 4-21, 6-21 ಪಾಯಿಂಟ್ ಗಳಿಂದ ಪರಾಭವಗೊಂಡು ಟೂರ್ನಿಯಿಂದ ಹೊರನಡೆದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com