Mandya : ಚಿತ್ರೀಕರಣ ಮುಗಿಸಿ ವಾಪಸ್ಸಾಗುತ್ತಿದ್ದ “ಅಯೋಗ್ಯ” ತಂಡದ ಕಾರು ಪಲ್ಟಿ

ಮಂಡ್ಯ : ಚಿತ್ರೀಕರಣ ಮುಗಿಸಿ ವಾಪಸ್ಸಾಗುತ್ತಿದ್ದಾಗ ಅಯೋಗ್ಯ ಚಿತ್ರತಂಡದ ಕಾರೊಂದು ಪಲ್ಟಿಯಾಗಿರುವ ಘಟನೆ ಮಂಡ್ಯದ ಮಾರಗೌಡೇನಹಳ್ಳಿಯಲ್ಲಿ ನಡೆದಿದೆ. ನೀನಾಸಂ ಸತೀಶ್ ಅಭಿನಯದ ಅಯೋಗ್ಯ ಸಿನಿಮಾ ಮಂಡ್ಯದ ಕೆರಗೋಡು ಸುತ್ತ ಮುತ್ತಲ ಪ್ರದೇಶದಲ್ಲಿ ಚಿತ್ರೀಕರಣ ನಡೆಸಲಾಗುತ್ತಿತ್ತು. ಮಂಗಳವಾರ ಸಹ ಚಿತ್ರೀಕರಣ ಮುಗಿಸಿ ನಾಲ್ಕು ಸಹ ಕಲಾವಿದರು ಕಾರಿನಲ್ಲಿ ವಾಪಸ್ಸಾಗುತ್ತಿದ್ದರು. ಈ ವೇಳೆ ಕಾರು ರಸ್ತೆಯಲ್ಲಿದ್ದ ರಾಗಿ ಹುಲ್ಲಿನ ಮೇಲೆ ಹೋಗುತ್ತಿದ್ದಂತೆ ಚಾಲಕನ ನಿಯಂತ್ರಣ ತರ್ರಿ ರಸ್ತೆ ಪಕ್ಕಕ್ಕೆ ಪಲ್ಟಿಯಾಗಿದೆ.

ನಾಲ್ವರು ಕಲಾವಿದರಿಗೆ ಚಿಕ್ಕ ಪುಟ್ಟ ಗಾಯಗಳಾಗಿದ್ದು, ಘಟನೆ ನಡೆದ ಕೂಡಲೆ ಸ್ಥಳಕ್ಕಾಗಮಿಸಿದ ಗ್ರಾಮಸ್ಥರು ಕಲಾವಿದರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಯಾರಿಗೂ ಹೆಚ್ಚಿನ ಪ್ರಮಾಣದ ಹೊಡೆತ ಬಿದ್ದಿಲ್ಲ ಎಂದು ತಿಳಿದುಬಂದಿದೆ.

 

Leave a Reply

Your email address will not be published.

Social Media Auto Publish Powered By : XYZScripts.com