ಗರ್ಭಿಣಿಯರಿಗೂ ಗ್ರಹಣ ಕಾಟ : ಹೆರಿಗೆ ಮುಂದೂಡುವಂತೆ ವೈದ್ಯರ ಮೊರೆ ಹೋದ ಮಹಿಳೆಯರು

ವಿಜಯಪುರ :ಜಗತ್ತು ಎಷ್ಟೇ ಮುಂದುವರಿದರೂ ಹಿಂದಿನಿಂದಲೂ ಬಂದಂತ ಕೆಲ ಮೂಢ ನಂಬಿಕೆಗಳು ಜನರಲ್ಲಿ ಇನ್ನೂ ಮಾಸಿಲ್ಲ. ಇದಕ್ಕೆ ಉದಾಹರಣೆ ಎಂಬಂತೆ ಇಂದು ಚಂದ್ರಗ್ರಹಣವಾದ ಹಿನ್ನೆಲೆಯಲ್ಲಿ ರಾಜ್ಯದ ಅನೇಕ ಆಸ್ಪತ್ರೆಗಳಲ್ಲಿ ಗರ್ಭಿಣಿಯರು ಗ್ರಹಣ ಕಾಲದಲ್ಲಿ ಹೆರಿಗೆ ಆಗದಂತೆ ನೋಡಿಕೊಳ್ಳಲು ವೈದ್ಯರ ಮೊರೆ ಹೋಗಿದ್ದಾರೆ.

ವಿಜಯಪುರದಲ್ಲೂ ಗರ್ಭಿಣಿಯರು ಆಸ್ಪತ್ರೆಯಲ್ಲಿ ವೈದ್ಯರ ಬಳಿ ಈ ಬಗ್ಗೆ ಮಾತುಕತೆ ನಡೆಸುತ್ತಿದ್ದಾರೆ. ಮೊದಲೇ ನಿಗಧಿಯಾಗಿದ್ದ ಸಿಜೇರಿಯನ್‌ಗೆ ಗರ್ಭಿಣಿಯರು ಒಪ್ಪದೆ ಹೆರಿಗೆ ಮುಂದೂಡುವಂತೆ ವೈದ್ಯರಲ್ಲಿ ಮನವಿ ಮಾಡುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ ಬಹುತೇಕ ಹೆರಿಗೆ ಆಸ್ಪತ್ರೆಗಳು ಖಾಲಿ ಹೊಡೆಯುತ್ತಿವೆ. ಅನೇಕ ಆಸ್ಪತ್ರೆಗಳಲ್ಲಿ ಗರ್ಭಿಣಿಯರಿಗೆ ಬೆಳಕು ಬೀಳದಂತೆ ಕಿಟಕಿಗಳನ್ನ ಮುಚ್ಚಿರುವ ದೃಶ್ಯ ಸಾಮಾನ್ಯವಾಗಿವೆ. ಅಲ್ಲದೆ ಗ್ರಹಣ ಕಳೆಯುವವರೆಗೂ ಯಾವುದೇ ತೊಂದರೆಯಾಗದಂತೆ ಪ್ರವಚನ ನಡೆಸುತ್ತಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com