ಗಂಟಲಲ್ಲಿ ಸಿಕ್ಕಿಹಾಕಿಕೊಂಡ ಸೆರ್‌ಲ್ಯಾಕ್‌ : ಉಸಿರಾಡಲಾಗದೆ ಒದ್ದಾಡಿ ಪ್ರಾಣಬಿಟ್ಟ 3 ತಿಂಗಳ ಮಗು

ರಾಮನಗರ : 3 ತಿಂಗಳ ಮಗುವಿಗೆ ಸೆರ್‌ಲ್ಯಾಕ್‌ ತಿನ್ನಿಸುವಾಗ ಗಂಟಲಕ್ಕಿ ಸಿಕ್ಕಿ ಮಗು ಸಾವಿಗೀಡಾಗಿರುವ ದಾರುಣ ಘಟನೆ ಮಾಗಡಿ ತಾಲ್ಲೂಕಿನ ಹೊಸಪಾಳ್ಯ ಗ್ರಾಮದಲ್ಲಿ ನಡೆದಿದೆ.

ಮಂಜುನಾಥ್ ಹಾಗೂ ಧನಲಕ್ಷ್ಮಿ ಎಂಬುವರ ಮಗುವಿಗೆ 3 ತಿಂಗಳಾಗಿತ್ತು. ಮಗುವಿಗೆ ತಾಯಿ ಸೆರ್‌ಲ್ಯಾಕ್‌ ತಿನ್ನಿಸುತ್ತಿದ್ದರು. ಈ ವೇಳೆ ಸೆರ್‌ಲ್ಯಾಕ್‌  ಗಂಟಲಲ್ಲಿ ಸಿಲುಕಿ ಉಸಿರಾಡಲು ಸಾಧ್ಯವಾಗದೆ ಒದ್ದಾಡಿದೆ. ಕೂಡಲೆ ಮಗುವನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಮಗು ಬದುಕುಳಿಯಲಿಲ್ಲ.

ಸಾಮಾನ್ಯವಾಗಿ ಮಕ್ಕಳಿಗೆ 6 ತಿಂಗಳಾಗುವವರೆಗೆ ತಾಯಿಯ ಹಾಲನ್ನು ಬಿಟ್ಟು ಬೇರೆ ಏನನ್ನೂ ತಿನ್ನಿಸಬೇಡಿ ಎಂದು ವೈದ್ಯರು ಸಲಹೆ ನೀಡುತ್ತಾರೆ. ಆದರೆ ಕೆಲ ಪೋಷಕರು ವೈದ್ಯರ ಮಾತನ್ನು ಮೀರಿ ಇತರೆ ಆಹಾರ ತಿನ್ನಿಸುತ್ತಾರೆ. ಅಂತೆಯೇ ಮಗುವಿಗೆ ಸೆರ್‌ಲ್ಯಾಕ್‌ ತಿನ್ನಿಸಿದ್ದರಿಂದ ಮಗು ಸಾವಿಗೀಡಾಗಿರುವುದಾಗಿ ವೈದ್ಯರು ಹೇಳಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com