Mysore : ಲೈಟ್‌ ಕಂಬಕ್ಕೆ ಗುದ್ದಿದ ಕಾರು : ಸ್ಥಳದಲ್ಲೇ ಮೂವರ ಸಾವು

ಮೈಸೂರು : ಮೈಸೂರಿನಲ್ಲಿ ಗ್ರಹಣದ ಬಿಸಿ ತಟ್ಟಿದೆ. ಸ್ವಿಫ್ಟ್‌ ಕಾರೊಂದು ಲೈಟ್ ಕಂಬಕ್ಕೆ ಗುದ್ದಿದ್ದು ಸ್ಥಳದಲ್ಲೇ ಮೂವರು ಸಾವಿಗೀಡಾಗಿದ್ದಾರೆ. ಇನ್ನಿಬ್ಬರಿಗೆ ಗಂಭೀರ ಗಾಯಗಳಾಗಿದ್ದು,  ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೈಸೂರಿನ ದಟ್ಟಗಳ್ಳಿ ಬಳಿ ಸ್ವಿಪ್ಟ್‌ ಕಾರಿನಲ್ಲಿ ಐವರು ಪ್ರಯಾಣಿಸುತ್ತಿದ್ದು, ಚಾಲಕನ ನಿಯಂತ್ರಣ ತಪ್ಪಿದ ಕಾರು ಲೈಟ್‌ ಕಂಬಕ್ಕೆ ಗುದ್ದಿದೆ. ಗುದ್ದಿದ ರಭಸಕ್ಕೆ ನೆಲದಿಂದ ಮೇಲಕ್ಕೆ ಕಾರು ಹಾರಿದ್ದು, ಈ ವೇಳೆ ಕಾರಿನಲ್ಲಿದ್ದ ಮೂವರು ಪ್ರಾಣ ಬಿಟ್ಟಿದ್ದಾರೆ. ಇನ್ನಿಬ್ಬರಿಗೆ ಗಾಯಗಳಾಗಿವೆ. ಮೈಸೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com