ಈ ಬಾರಿ ಚುನಾವಣೆಯಲ್ಲಿ ಪ್ರಬುದ್ಧತೆಯಿಂದ ಯೋಚಿಸಿ ಮತ ಹಾಕಿ : ಪ್ರಕಾಶ್‌ ರೈ

ಮೈಸೂರು : ಕರ್ನಾಟಕದಲ್ಲಿ ಕೆಲವರು ಕೋಮುವಾದದ ವಿಷ ಬೀಜ ಬಿತ್ತುತ್ತಿದ್ದಾರೆ. ಈ ಮೂಲಕ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ ಎಂದು ನಟ ಪ್ರಕಾಶ್ ರೈ ಹೇಳಿದ್ದಾರೆ.

ಮೈಸೂರಿನಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಸೌಹಾರ್ದ ಸರಪಳಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅವರು, ರಾಜ್ಯದ ಶಾಂತಿ ಹಾಳು ಮಾಡುತ್ತಿರುವವರ ವಿರುದ್ಧದ ಪ್ರತಿಭಟನೆ ಇದು, ಇಂತಹವರಿಂ ಜನ ಬೇಸತ್ತಿದ್ದಾರೆ. ಕೋಮುಸೌಹಾರ್ದತೆ ಕದಡುವವರಿಗೆ ಇದೊಂದು ಎಚ್ಚರಿಕೆಯ ಗಂಟೆ. ಕೋಮುವಾದಿಗಳಿಗೆ , ರಾಜ್ಯದಲ್ಲಿ ಶಾಂತಿ ಕಾಪಾಡುವವರಿಗೆ ಜನರೇ ತಕ್ಕ ಪಾಠ ಕಲಿಸುವುದಾಗಿ ಹೇಳಿದ್ದಾರೆ.

ಇದೊಂದು ಆಶಾಕಿರಣ. ಜನರೆಲ್ಲ ಕೋಮು ಶಕ್ತಿಗಳ ವಿರುದ್ದ ಒಂದಾಗಬೇಕು. ದೇಶದ ಪ್ರತಿಯೊಬ್ಬ ಪ್ರಜೆಯೂ ಭಯವಿಲ್ಲದೆ ಜೀವಿಸುವಂತಾಗಬೇಕು. ನಮಗೆ ರಾಜಕೀಯ ಮುಖ್ಯವಲ್ಲ, ಶಾಂತಿ ಮುಖ್ಯ. ಮತಹಾಕುವಾಗ ಜನರು ಧರ್ಮ, ಜಾತಿ ನೋಡುವುದಿಲ್ಲ. ಈ ಬಾರಿಯೂ ಮತ, ಧರ್ಮ ನೋಡದೆ ಪ್ರಬುದ್ದವಾಗಿ ಯೋಚಿಸಿ ಮತ ಹಾಕುವಂತೆ ಮನವಿ ಮಾಡಿದ್ದಾರೆ.

Leave a Reply

Your email address will not be published.