ನಟ ಶಾರುಕ್‌ ಖಾನ್‌ಗೆ IT ಶಾಕ್‌ : ಐಶಾರಾಮಿ ಬಂಗಲೆ ಜಪ್ತಿ ಮಾಡಿದ ಅಧಿಕಾರಿಗಳು

ಮುಂಬೈ : ಬಾಲಿವುಡ್‌ ಬಾದ್‌ ಶಾ ಎಂದೇ ಕರೆಯಲ್ಪಡುವ ಶಾರುಕ್‌ ಖಾನ್‌ಗೆ ಐಟಿ ಸಂಕಷ್ಟ ಎದುರಾಗಿದೆ. ಮುಂಬೈನಲ್ಲಿರುವ ಶಾರುಕ್‌  ಅವರ ಅಲಿಬಾಗ್‌ ಬಂಗಲೆಯನ್ನು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಬೇನಾಮಿ ಆಸ್ತಿ ಕಾಯ್ದೆಯಡಿ ತಾತ್ಕಾಲಿಕವಾಗಿ ಜಪ್ತಿ ಮಾಡಿದ್ದಾರೆ.

ಇನ್ನು ಈ ಕುರಿತು ಶಾರುಕ್ ಶಾನ್‌ 90 ದಿನದೊಳಗೆ ತಮ್ಮ ಉತ್ತರವನ್ನು ಅಂಗೀಕಾರ ಪ್ರಾಧಿಕಾರದ ಮುಂದೆ ಸಲ್ಲಿಸಲು ಸೂಚಿಸಲಾಗಿದೆ.

ಮೂಲಗಳ ಪ್ರಕಾರ ಅಲಿಭಾಗ್‌ ಪ್ರಾಂತ್ಯದಲ್ಲಿನ ಕೃಷಿ ಭೂಮಿಯನ್ನು ದೇಜಾ ವೂ ಫಾರ್ಮ್‌ ಫ್ರೈ.ಲಿ ಎಂಬ ಸಂಸ್ಥೆ ಕೃಷಿ ಚಟುವಟಿಕೆ ನಡೆಸುವುದಾಗಿ ಹೇಳಿ ಖರೀದಿ ಮಾಡಿತ್ತು. ಇದಕ್ಕೆ ಶಾರುಕ್‌ ಖಾನ್‌ ಸಹ ಪರೋಕ್ಷವಾಗಿ ಹಣ ಹೂಡಿಕೆ ಮಾಡಿದ್ದರು. ಆದರೆ ಅಲ್ಲಿ ಯಾವುದೇ ಕೃಷಿ ಚಟುವಟಿಕೆ ನಡೆಸದೆ, ಶಾರುಕ್ ಖಾನ್‌ ಐಶಾರಾಮಿ ಬಂಗಲೆ ನಿರ್ಮಿಸಿ ವಾಸಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಈ ಬಂಗಲೆ 19,960 ಚದರ ಮೀ. ವಿಸ್ತೀರ್ಣವಿದ್ದು, ಈಜುಕೊಳ, ಖಾಸಗಿ ಹೆಲಿಪ್ಯಾಡ್‌ ಸಹ ಇದರಲ್ಲಿದೆ. ಈ ಬಂಗಲೆಗೆ ಶಾರುಕ್‌ 8.5 ಕೋಟಿರೂ ಭದ್ರತೆಯಿಲ್ಲದ ಸಾಲ ನೀಡಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com