70 ಸಾವಿರ ರೂ ಬೆಲೆಯ ಕೋಟು ತೊಟ್ಟ ರಾಹುಲ್‌ ಗಾಂಧಿ : ಇದಕ್ಕೆ BJP ಹೇಳಿದ್ದೇನು…?

ಶಿಲ್ಲಾಂಗ್‌ : ಪ್ರತೀ ಬಾರಿ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಸುದ್ದಿ ಮಾಡುತ್ತಿದ್ದರು. ಆದರೆ ಈ ಬಾರಿ ಅವರ ಕೋಟ್‌ ಸುದ್ದಿ ಮಾಡುತ್ತಿದೆ.
ಹೌದು, ಆಡಳಿತಾರೂಢ ಬಿಜೆಪಿ ಸರ್ಕಾರವನ್ನು ಸೂಟುಬೂಟಿನ ಸರ್ಕಾರ ಎಂದು ಗೇಲಿ ಮಾಡುತ್ತಿದ್ದ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ತಾವು ತೊಟ್ಟ ಕೋಟಿನ ವಿಚಾರಕ್ಕೆ ಸುದ್ದಿಯಾಗಿದ್ದಾರೆ.
ಮೇಘಾಲಯದಲ್ಲಿ ನಡೆದ ಸಂಗೀತ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ರಾಹುಲ್‌ ಗಾಂಧಿ, ದುಬಾರಿ ಬೆಲೆಯ ಕೋಟು ತೊಟ್ಟದ್ದರು. ಬ್ರಿಟೀಷ್‌ ಐಶಾರಾಮಿ ಫ್ಯಾಷನ್‌ ಬ್ರ್ಯಾಂಡ್‌ ಬರ್ಬೆರಿ ಕಂಪನಿಯ ಈ ಕೋಟಿನ ಬೆಲೆ ಬರೋಬ್ಬರಿ 70 ಸಾವಿರವಾಗಿತ್ತು. ಈ ಹಿನ್ನೆಲೆಯಲ್ಲಿ ಬಿಜೆಪಿ, ರಾಹುಲ್‌ ವಿರುದ್ಧ ವ್ಯಂಗ್ಯ ಮಾಡತೊಡಗಿದ್ದಾರೆ.
 ಮೇಘಾಲಯದ ಸೂಟ್‌ ಬೂಟ್‌ ಸರ್ಕಾರ, ಕಪ್ಪು ಹಣದ ಮೂಲಕ ಸರ್ಕಾರದ ಬೊಕ್ಕಸವನ್ನು ಖಾಲಿ ಮಾಡುತ್ತಿದೆ. ನೀವು ಸಂಗೀತ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಬದಲು, ಮೇಘಾಲಯಗಲ್ಲಿರುವ ನಿಮ್ಮ ಅದಕ್ಷ ಸರ್ಕಾರ ಏನು ಮಾಡುತ್ತಿದೆ ಎಂದು ನೋಡಿ. ಮೊದಲು ಅವರನ್ನು ಸರಿಪಡಿಸಿ ಎಂದು ಮೇಘಾಲಯದ ರಾಜ್ಯ ಬಿಜೆಪಿ ಘಟಕ ಟ್ವೀಟ್ ಮಾಡಿದೆ.

Leave a Reply

Your email address will not be published.

Social Media Auto Publish Powered By : XYZScripts.com