ಹಳಿ ದಾಟುವಾಗ ಡಿಕ್ಕಿ ಹೊಡೆದ ರೈಲು : ಮಗು ಸೇರಿ ಮೂವರ ಸಾವು

ಮಂಗಳೂರು : ರೈಲ್ವೇ ಹಳಿ ದಾಟುತ್ತಿದ್ದ ವೇಳೆ ರೈಲು ಡಿಕ್ಕಿಯಾಗಿ ಒಂದೂವರೆ ವರ್ಷದ ಮಗು ಸೇರಿದಂತೆ ಮೂವರು ದಾರುಣವಾಗಿ ಸಾವಿಗೀಡಾಗಿರುವ ಘಯನೆ ಕಾಸರಗೋಡು ಬಳಿಯ ಮಂಜೇಶ್ವರದಲ್ಲಿ ನಡೆದಿದೆ.

ಮಂಜೇಶ್ವರದ ಮುಖ್ಯರಸ್ತೆಯಿಂದ ರೈಲ್ವೇ ಹಳಿ ದಾಟಿ ಮತ್ತೊಂದು ರಸ್ತೆಗೆ ಹೋಗಬೇಕಿತ್ತು. ಒಂದು ರೈಲು ಹೋದ ಬಳಿಕ ಇಬ್ಬರು ಮಹಿಳೆಯರು ಹಾಗೂ ಒಂದು ಮಗು ಹಳಿ ದಾಟುತ್ತಿದ್ದ ವೇಳೆ ವೇಗವಾಗಿ ಬಂದ ರೈಲು ಮೂವರಿಗೆ ಡಿಕ್ಕಿ ಹೊಡೆದಿದೆ. ಮಹಿಳೆಯರ ಗುರುತು ಇನ್ನೂ ಪತ್ತೆಯಾಗಿಲ್ಲ.

ಸ್ಥಳಕ್ಕೆ ಮಂಜೇಶ್ವರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com