ಅಭಿಮಾನಿಗಳಿಗೆ ಭಾವನಾತ್ಮಕವಾಗಿ ಪತ್ರ ಬರೆದ ಕಿಚ್ಚ ಸುದೀಪ್‌….ಪತ್ರದಲ್ಲೇನಿದೆ ?

ಕಿಚ್ಚ ಸುದೀಪ್‌, ತಮ್ಮ ಅಭಿನಯದ ಮೂಲಕವೇ ಅಭಿಮಾನಿಗಳನ್ನು ಸಂಪಾದಿಸಿ ಅಭಿನಯ ಚಕ್ರವರ್ತಿ ಎಂಬ ಬಿರುದು ಗಳಿಸಿದ ಖ್ಯಾತ ನಟ. ಕಿಚ್ಚ ಸುದೀಪ್‌ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟು 22 ವರ್ಷ ತುಂಬಿದೆ. ಈ ಹಿನ್ನೆಲೆಯಲ್ಲಿ ತಮ್ಮ ಪ್ರೀತಿಯ ಅಭಿಮಾನಿಗಳಿಗೆ ಕಿಚ್ಚ ಪತ್ರವೊಂದನ್ನು ಬರೆದಿದ್ದಾರೆ.

ಈ ಪತ್ರದಲ್ಲಿ ಕಿಚ್ಚ ಸುದೀಪ್‌ ತಾವು ಸಿನಿಮಾ ರಂಗದಲ್ಲಿ ನಡೆದು ಬಂದ ಹಾದಿಯನ್ನು ಬಿಚ್ಚಿಟ್ಟಿದ್ದಾರೆ. ನಾನು ಮೊದಲ ಬಾರಿಗೆ ಬ್ರಹ್ಮ ಸಿನಿಮಾಗಾಗಿ 1996ರಲ್ಲಿ ಬಣ್ಣ ಹಚ್ಚಿದ್ದೆ. ಈ ಚಿತ್ರದ ಮೂಲಕ ಸಿನಿಮಾ ರಂಗದ ನನ್ನ ಪ್ರಯಾಣ ಶುರು ಮಾಡಿದ್ದೆ. ಇದಕ್ಕೂ ಮುನ್ನ ನಾನು ನನ್ನ ತಂದೆ, ಸ್ನೇಹಿತರ ಜೊತೆ ಚಿತ್ರೀಕರಣ ಸ್ಥಳಕ್ಕೆ ಹೋದಾಗ ಆ್ಯಕ್ಷನ್‌ -ಕಟ್‌ನಲ್ಲಿ  ಭಾಗಿಯಾಗುವ ಅನುಭವ ಮಾತ್ರ ಇತ್ತು.

ಚಿತ್ರದಲ್ಲಿ ಅಂಬರೀಶ್‌ ನನ್ನ ಅಣ್ಣನ ಪಾತ್ರ ಮಾಡಿದ್ದು, ಕೇವಲ ಆಶಿರ್ವಾದ ಪಡೆಯುವ ಸೀನ್‌ಗಾಗಿ ಅನೇಕ ಟೇಕ್‌ ತೆಗೆದುಕೊಂಡಿದ್ದೆ. ಅಂದು ನನ್ನ ಮೇಲೆ ಎಲ್ಲರಿಗೂ ಅನುಮಾನವಿತ್ತು. ಆದರೆ ಬರು ಬರುತ್ತಾ ನಿಧಾನವಾಗಿ ಎಲ್ಲವನ್ನೂ ಕಲಿಯುತ್ತಾ ಬಂದೆ. ಇಂದಿಗೆ ನನ್ನ ಸಿನಿಮಾ ವೃತ್ತಿ ಜೀವನಕ್ಕೆ 22 ವರ್ಷ ತುಂಬಿದೆ. ಇದರಲ್ಲಿ ಭಾಗಿದಾರರಾ ಎಲ್ಲರಿಗೂ ಧನ್ಯವಾದ ಅರ್ಪಿಸುತ್ತೇನೆ.

ಸಿನಿಮಾ ಎಂಬುದು ನನ್ನ ಜೀವನದ ಸುಂದರ ಸಂಗತಿ. ಇಂದು ನಾನೇನಾಗಿದ್ದೇನೋ ಅದೆಲ್ಲ ನೀವು ಕೊಟ್ಟ ಉಡುಗೊರೆ. ಇಂತಿ ನಿಮ್ಮ ತುಂಬು ಪ್ರೀತಿಯ ಮತ್ತು ಅಪ್ಪುಗೆಯ ಕಿಚ್ಚ ಎಂದು ಬರೆದಿದ್ದಾರೆ.

 

 

Leave a Reply

Your email address will not be published.

Social Media Auto Publish Powered By : XYZScripts.com