ಕಾಸ್ಗಂಜ್ ಹಿಂಸಾಚಾರ : ಚಂದನ್ ಗುಪ್ತಾ ಕೊಲೆ ಪ್ರಕರಣದ ಆರೋಪಿಯ ಬಂಧನ

ಉತ್ತರ ಪ್ರದೇಶದ ಕಾಸ್ಗಂಜ್ ನಲ್ಲಿ ನಡೆದ ಕೋಮುಗಲಭೆ ಹಿಂಸಾಚಾರದಲ್ಲಿ ಗುಂಡೇಟಿನಿಂದ ಸಾವಿದೀಡಾದ ಚಂದನ್ ಗುಪ್ತಾ ಕೊಲೆ ಪ್ರಕರಣದಲ್ಲಿ ಓರ್ವ ಆರೋಪಿಯನ್ನು ಬಂಧಿಸಲಾಗಿದೆ. ಕಾಸ್ಗಂಜ್ ನಲ್ಲಿ ಬಟ್ಟೆ ಅಂಗಡಿ ವ್ಯಾಪಾರಿಯಾಗಿರುವ ಸಲೀಮ್ ಎಂಬಾತನನ್ನು 22 ವರ್ಷದ ಚಂದನ್ ಗುಪ್ತಾ ಮೇಲೆ ಗುಂಡು ಹಾರಿಸಿದ ಆರೋಪದ ಮೇಲೆ ಪೋಲೀಸರು ಬಂಧಿಸಿದ್ದಾರೆ.

ಹಿರಿಯ ಪೋಲೀಸ್ ಅಧಿಕಾರಿ ಆನಂದ್ ಕುಮಾರ್ ‘ ಘಟನಾ ಸಳದಲ್ಲಿದ್ದ ಕೆಲವು ಸಾಕ್ಷಿಗಳ ಹೇಳಿಕೆಯ ಪ್ರಕಾರ ಸಲೀಮ್ ತನ್ನ ಮನೆಯ ಮಹಡಿ ಅಥವಾ ಬಾಲ್ಕನಿಯಿಂದ ಗುಂಡು ಹಾರಿಸಿದ್ದಾನೆ. ಆತನ ಮನೆಯಿಂದ ಕೆಲವು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದೇವೆ. ಚಂದನ್ ದೇಹದಲ್ಲಿ ದೊರೆತ ಬುಲೆಟ್ ಹಾಗೂ ಸಲೀಮ್ ಬಳಿಯಿದ್ದ ಗನ್ ಬ್ಯಾಲಿಸ್ಟಿಕ್ ಪರೀಕ್ಷೆಗೆ ಒಳಪಡಿಸಿ ತನಿಖೆ ನಡೆಸುತ್ತಿದ್ದೇವೆ ‘ ಎಂದು ಹೇಳಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com