JDS ನಂತೆ ಮಾತು ತಪ್ಪುವ ಪದ್ಧತಿ ಕಾಂಗ್ರೆಸ್ ನಲ್ಲಿಲ್ಲ, 7 ಜನಕ್ಕೂ ಟಿಕೆಟ್ ಕನ್ಫರ್ಮ್ : ಜಮೀರ್

ಬಂಡಾಯ ಶಾಸಕರ ಬಗ್ಗೆ ಇಂಟೆಲಿಜೆನ್ಸಿ ರಿಪೋರ್ಟ್ ವಿಚಾರವಾಗಿ ಮಂಡ್ಯದಲ್ಲಿ ಮಾತನಾಡಿರುವ ಜಮೀರ್ ಅಹಮದ್ ಖಾನ್, ‘ ಜೆಡಿಎಸ್ ನಿಂದ ಸರ್ವೇ ರಿಪೋರ್ಟ್ ಹೋಗಿರಬಹುದು. ಇಂಟೆಲಿಜೆನ್ಸಿ ರಿಪೋರ್ಟ್ ಕೊಡೋಕೆ ಸಾಧ್ಯವಿಲ್ಲ. ದೇವೇಗೌಡ, ಕುಮಾರಸ್ವಾಮಿ, ಜೆಡಿಎಸ್ ಕೂಟ್ಟಿರಬಹುದು ‘ ಎಂದು ಹೇಳಿದ್ದಾರೆ.

‘ ಕಾಂಗ್ರೆಸ್ ಸರ್ವೇಯಲ್ಲಿ ಏಳು ಜನ ಗೆಲ್ಲೋದಾಗಿ ಬಂದಿದೆ. ನೀವೇಳ್ತಿರೋ ಸರ್ವೇ ರಿಪೋರ್ಟ್ ಜನತಾ ದಳ ಕಳಿಸಿರಬಹುದು. ನಮ್ಮನ್ನ ಸೋಲಿಸೋಕೆ ಅವರು ಪ್ರಯತ್ನ ಮಾಡ್ತಿದ್ದಾರೆ. ಅವರಿಗೆ 224ರಲ್ಲಿ ನಮ್ಮ ಮೂರೇ ಕ್ಷೇತ್ರ ಇಂಪಾರ್ಟೆಂಟ್. ಅವರ ಟಾರ್ಗೆಟ್ ಇರೋದೇ ಮೂರು ಕ್ಷೇತ್ರ. ಚಲುವರಾಯಸ್ವಾಮಿ, ರಮೇಶ್ ಬಂಡಿಸಿದ್ದೇಗೌಡ, ಬಾಲು ಇವರೆ ಅವರ ಟಾರ್ಗೆಟ್ ‘ ಎಂದಿದ್ದಾರೆ.

‘ ಏಳು ಜನಕ್ಕೂ ಟಿಕೆಟ್ ಕನ್ಫರ್ಮ್ ಆಗಿದೆ. ರಾಹುಲ್ ಗಾಂಧಿ, ಸಿದ್ದರಾಮಯ್ಯ, ಪರಮೇಶ್ವರ್ ಮೂವರೂ ಮಾತು ಕೊಟ್ಟಿದ್ದಾರೆ. ಟಿಕೆಟ್ ಯಾರಿಂದಲೂ ತಪ್ಪಿಸೋಕೆ ಸಾಧ್ಯವಾಗಲ್ಲ. ಕಾಂಗ್ರೆಸ್ ಒಮ್ಮೆ ಕೊಟ್ಟ ಮಾತಿಂದ ಹಿಂದೆ ಹೋಗಲ್ಲ. ಜೆಡಿಎಸ್ ಪಕ್ಷದಂತೆ ಮಾತು ತಪ್ಪುವ ಪದ್ಧತಿ ಕಾಂಗ್ರೆಸ್ಸಲ್ಲಿಲ್ಲ ‘ ಎಂದು ಹೇಳಿದ್ದಾರೆ.

One thought on “JDS ನಂತೆ ಮಾತು ತಪ್ಪುವ ಪದ್ಧತಿ ಕಾಂಗ್ರೆಸ್ ನಲ್ಲಿಲ್ಲ, 7 ಜನಕ್ಕೂ ಟಿಕೆಟ್ ಕನ್ಫರ್ಮ್ : ಜಮೀರ್

  • January 31, 2018 at 3:39 PM
    Permalink

    Nimma appange huttidre win sulemagane

    Reply

Leave a Reply

Your email address will not be published.