ಭಾರತದ ಮುಸ್ಲಿಮರು ಪ್ರತ್ಯೇಕ ರಾಷ್ಟ್ರಕ್ಕೆ ಬೇಡಿಕೆ ಇಡಬೇಕು : ನಾಸಿರ್ ಉಲ್ ಇಸ್ಲಾಮ್

‘ ಭಾರತೀಯ ಮುಸ್ಲಿಮರು ಪ್ರತ್ಯೇಕ ರಾಷ್ಟ್ರಕ್ಕೆ ಬೇಡಿಕೆ ಇಡಬೇಕು ‘ ಎಂದು ಜಮ್ಮು ಕಾಶ್ಮೀರದ ರಾಜ್ಯ ಮುಸ್ಲಿಮ್ ವೈಯಕ್ತಿಕ ಕಾನೂನು ಬೋರ್ಡಿನ ಉಪಾಧ್ಯಕ್ಷರಾಗಿರುವ ಗ್ರ್ಯಾಂಡ್ ಮುಫ್ತಿ ನಾಸಿರ್ ಉಲ್ ಇಸ್ಲಾಮ್ ಹೇಳಿದ್ದಾರೆ.

ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿರುವ ನಾಸಿರ್ ಉಲ್ ಇಸ್ಲಾಮ್ ‘ ಭಾರತ ಅಸಹಿಷ್ಣುತೆಯ ದಾರಿಯಲ್ಲಿ ಸಾಗುತ್ತಿದೆ. ನಾನಾ ಕಾರಣಗಳನ್ನು ಇಟ್ಟುಕೊಂಡು ದೇಶದಲ್ಲಿರುವ ಮುಸ್ಲಿಮರಿಗೆ ಕಿರುಕುಳ ನೀಡಲಾಗುತ್ತಿದೆ. ಗೋ ರಕ್ಷಣೆ, ಲವ್ ಜಿಹಾದ್ ಹಾಗೂ ತ್ರವಳಿ ತಲಾಖ್ ವಿಚಾರಗಳನ್ನು ಎದುರಿಟ್ಟುಕೊಂಡು ಮುಸ್ಲಿಮರಿಗೆ ಕಿರುಕುಳ ನೀಡಲಾಗುತ್ತಿದೆ ‘ ಎಂದು ಹೇಳಿದ್ದಾರೆ.

‘ 1947 ರಲ್ಲಿ 17 ಕೋಟಿ ಮುಸ್ಲಿಮರಿಂದ ಪಾಕಿಸ್ತಾನ ನಿರ್ಮಾಣವಾಯಿತು. ಈಗಲೂ ಭಾರತದಲ್ಲಿ ಮುಸ್ಲಿಮರು ಕಿರುಕುಳ ಅನುಭವಿಸುವಂತಾದರೆ ಮತ್ತೊಂದು ರಾಷ್ಟ್ರಕ್ಕೆ ಬೇಡಿಕೆ ಇಡಬೇಕು, ಪ್ರತ್ಯೇಕ ರಾಷ್ಟ್ರದ ಬೇಡಿಕೆ ಇಡಲು ಇದು ಸೂಕ್ತ ಸಮಯ ‘ ಎಂದು ಹೇಳಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com