U-19 WC : Ind vs Aus ಫೈನಲ್ ಬಗ್ಗೆ ಸೌರವ್ ಭವಿಷ್ಯ : ದಾದಾ ಹೇಳಿದ್ದೇನು..?

ನ್ಯೂಜಿಲೆಂಡ್ ನಲ್ಲಿ ನಡೆಯುತ್ತಿರುವ 19 ವರ್ಷದೊಳಗಿನವರ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವೆ ಫೆಬ್ರವರಿ 3 ರಂದು ಶನಿವಾರ ನಡೆಯಲಿದೆ. ಸೆಮಿಫೈನಲ್ ನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು 203 ರನ್ ಗಳಿಂದ ಮಣಿಸಿ ಭಾರತ ಫೈನಲ್ ತಲುಪಿದೆ.

ಫೈನಲ್ ಕುರಿತು ಭವಿಷ್ಯ ನುಡಿದಿರುವ ಮಾಜಿ ನಾಯಕ ಸೌರವ್ ಗಂಗೂಲಿ ‘ ಭಾರತ U-19 ವಿಶ್ವಕಪ್ ಅನ್ನು ಗೆಲ್ಲಲಿದೆ. ನಮ್ಮ ತಂಡದಲ್ಲಿ ಶುಭಮನ್ ಗಿಲ್, ಕಮಲೇಶ್ ನಗರಕೋಟಿ, ಶಿವಮ್ ಮವಿ, ಇಶಾನ್ ಪೊರೆಲ್ ಅವರಂತಹ ಪ್ರತಿಭಾವಂತ ಆಟಗಾರರಿದ್ದಾರೆ ‘ ಎಂದು ಹೇಳಿದ್ದಾರೆ.

Image result for sourav ganguly u-19

‘ ಕೋಚ್ ರಾಹುಲ್ ದ್ರಾವಿಡ್ ಮಾರ್ಗದರ್ಶನದಲ್ಲಿ ಗೆಲ್ಲುತ್ತಾರೆಂದು ಆಶಿಸುತ್ತೇನೆ. ಟೂರ್ನಿಯಲ್ಲಿ ಭಾರತದ ಕಿರಿಯರು ನಿರಂತರವಾಗಿ ಎಲ್ಲ ಪಂದ್ಯಗಳನ್ನು ಗೆದ್ದಿದ್ದಾರೆ. ಲೀಗ್ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು 100 ರನ್ ಅಂತರದಲ್ಲಿ ಸೋಲಿಸಿದ್ದರು. ಫೈನಲ್ ನಲ್ಲಿಯೂ ಅದನ್ನೇ ಮಾಡುತ್ತಾರೆಂದು ಆಶಿಸುತ್ತೇನೆ ‘ ಎಂದು ದಾದಾ ಹೇಳಿದ್ದಾರೆ.

Image result for sourav ganguly u-19

ಭಾರತ ಇದುವರೆಗೂ 3 ಬಾರಿ ಅಂಡರ್-19 ವಿಶ್ವಕಪ್ ಎತ್ತಿಹಿಡಿದಿದೆ. 2000 ದಲ್ಲಿ ಮಹಮ್ಮದ್ ಕೈಫ್ ನೇತೃತ್ವದಲ್ಲಿ, 2008 ರಲ್ಲಿ ವಿರಾಟ್ ಕೊಹ್ಲಿ ಮುಂದಾಳತ್ದದಲ್ಲಿ ಹಾಗೂ 2012 ರಲ್ಲಿ ಉನ್ಮುಕ್ತ್ ಚಂದ್ ನಾಯಕತ್ವದಲ್ಲಿ ಭಾರತ ಚಾಂಪಿಯನ್ ಆಗಿತ್ತು.

Leave a Reply

Your email address will not be published.

Social Media Auto Publish Powered By : XYZScripts.com