ಬೆಳಗಾವಿ : ಗಂಡ-ಹೆಂಡತಿ ಜಗಳ ಬಿಡಿಸಲು ಹೋದವನಿಗೆ ಆದ ಗತಿಯೇನು..?

ಗಂಡ ಹೆಂಡತಿಯರ ನಡುವಿನ ಜಗಳ ಉಂಡು ಮಲಗುವ ತನಕ ಎಂಬ ಮಾತೊಂದಿದೆ. ಆದರೆ ಪತಿ ಪತ್ನಿಯರ ಜಗಳ ಅತಿರೇಕಕ್ಕೆ ಹೋದಾಗ ಬೇರೆಯವರು ಬಂದು ಬಿಡಿಸುವುದು ವಾಡಿಕೆ. ಹೀಗೆ ಗಂಡ ಹೆಂಡತಿಯರ ನಡುವಿನ ಜಗಳ ಬಿಡಿಸಲು ವ್ಯಕ್ತಿಯೊಬ್ಬ ಕೊಲೆಯಾಗಿದ್ದಾನೆ.

ಗಂಡ ಹೆಂಡತಿಯ ನಡುವಿನ ಜಗಳ ಬಿಡಿಸಲು ಹೋಗಿದ್ದ ವ್ಯಕ್ತಿಯೊಬ್ಬ ಕೊಲೆಯಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ನಿಪ್ಪಾಣಿ ಪಟ್ಟಣದ ಹಿದಾಯತ್ ನಗರದಲ್ಲಿ ನಡೆದಿದೆ.

ಜಗಳವಾಡುತ್ತಿದ್ದ ಪತಿ ಪತ್ನಿಯನ್ನು ಭಾಮೈದ ಬಿಡಿಸಲು ಮುಂದಾಗಿದ್ದಾನೆ. ಪತ್ನಿಯೊಂದಿಗೆ ಜಗಳವಾಡುತ್ತಿದ್ದ ಹೈದರಾಲಿ ಮುಜಾವರ್ ತನ್ನ ಭಾಮೈದ ರಮಜಾನ ಮುಜಾವರ (೪೭) ನನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಲಾಗಿದೆ.

ಆರೋಪಿ ಹೈದರಾಲಿ ಮುಜಾವರನನ್ನು ಸ್ಥಳೀಯ ಪೊಲೀಸರು ಪಡೆದಿದ್ದಾರೆ. ನಿಪ್ಪಾಣಿ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com