ಈ ಸಿದ್ದರಾಮಯ್ಯನ ಹೇಳಿಕೆಗೆ ಬೆಂಬಲ ಸಿಗೋದು ಪಾಕಿಸ್ತಾನದಲ್ಲೇ… : ಪ್ರಹ್ಲಾದ್‌ ಜೋಷಿ

ಕೊಪ್ಪಳ : ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆಗೆ ಸದಾ ಪಾಕಿಸ್ತಾನಿಗಳು ಬೆಂಬಲ ಸೂಚಿಸುತ್ತಾರೆ. ಸಿದ್ದರಾಮಯ್ಯ ಸಹ ಪಾಕಿಸ್ತಾನಕ್ಕೆ ಸಪೋರ್ಟ್ ಮಾಡುತ್ತಾರೆ ಎಂದು ಸಂಸದ ಪ್ರಹ್ಲಾದ್ ಜೋಷಿ ಹೇಳಿದ್ದಾರೆ.

ಕೊಪ್ಪಳದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಈ ಸಿಎಂನ್ನು ಕಿತ್ತೊಗೆಯಬೇಕು. ಆರ್‌ಎಸ್‌ಎಸ್‌ ಹಾಗೂ ಭಜರಂಗದಳದವರು ಭಯೋತ್ಪಾದಕರು ಎನ್ನುತ್ತಾರೆ. ಇದಕ್ಕೆ ಬಹುಶಃ ಪಾಕಿಸ್ತಾನದಲ್ಲಿ ಸಿದ್ದರಾಮಯ್ಯನಿಗೆ ಬೆಂಬಲ ಸಿಕ್ಕಿರಬೇಕು. ವೋಟ್‌ ಬ್ಯಾಂಕ್‌ಗಾಗಿ ಏನು ಬೇಕಾದರೂ ಮಾಡುತ್ತಾರೆ. ಇದು ಸಿಎಂ ಮುಠ್ಠಾಳತನ. ಮಹದಾಯಿ ವಿಚಾರದಲ್ಲಿ ಕನ್ನಡಪರ ಸಂಘಟನೆಗಳನ್ನು ಛೂ ಬಿಟ್ಟು ಹೋರಾಟ ಮಾಡಿಸುತ್ತಾರೆ. ಆ ವಾಟಾಳ್‌ ನಾಗರಾಜ್‌ಗೆ ಬುದ್ದಿ ಇಲ್ಲ. ಮಹದಾಯಿ ಎಲ್ಲಿ ಹರಿಯುತ್ತೆ ಅನ್ನೋದೂ ಅವರಿಗೆ ಗೊತ್ತಿಲ್ಲ. ಅವರೊಬ್ಬ ಕಾಂಗ್ರೆಸ್ ಏಜೆಂಟ್‌ ಎಂದು ಟೀಕಿಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com