ರಾಜ್ಯದ ಗೃಹ ಸಚಿವರೇನು ಷಂಡರೇ ? : ಕಾಂಗ್ರೆಸ್‌ ವಿರುದ್ದವೇ ಸಿಡಿದೆದ್ದ KPCC ಮಾಜಿ ಸದಸ್ಯ

ಬೆಳಗಾವಿ : ಕಾಂಗ್ರೆಸ್ ಮುಖಂಡರು ಸಿಎಂ ಸಿದ್ದರಾಮಯ್ಯ ಅವರ ನೆರಳಿನಲ್ಲಿದ್ದಾರೆ ಎಂದು ಕೆಪಿಸಿಸಿ ಮಾಜಿ ಸದಸ್ಯ ಶಂಕರ ಮುನವಳ್ಳಿ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದ್ದಾರೆ.
ಹಣಕ್ಕಾಗಿ ಮಾತ್ರ ವೇಣುಗೋಪಾಲ್ ಸೇರಿದಂತೆ ಹಲವರು ಚುನಾವಣೆ ಮಾಡುತ್ತಿದ್ದಾರೆ. ರಾಜ್ಯದ ಬಹುತೇಕ ಕಾಂಗ್ರೆಸ್ ನಾಯಕರು ಹಣ ಇದ್ದವರ ಗುಲಾಮರು ಎಂದಿದ್ದು,
ಮಹಾತ್ಮಗಾಂಧಿ ಹತ್ಯೆ ಸಮರ್ಥಿಸಿಕೊಂಡ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯದ ಗೃಹ ಸಚಿವರೇನು ಷಂಡರಿದ್ದಾರೆಯೇ? ಎಂದು ಗುಡುಗಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದಿಂದ ಸಾಮಾಜಿಕ ನ್ಯಾಯ ಸಿಕ್ಕಿಲ್ಲ, ಕಾಂಗ್ರೆಸ್ ದಲಿತರ ಪರವಾಗಿ, ಅಲ್ಪಸಂಖ್ಯಾತರ ಪರವಾಗಿ ಕೆಲಸ ಮಾಡ್ತಿಲ್ಲ. ಹಾಗಾಗಿ ಕಾಂಗ್ರೆಸ್ ಗೆ ಯಾರೂ ಮತ ಹಾಕದೇ ನೋಟಾ ಬಟನ್ ಒತ್ತಿ ಎಂದು ಜನರಿಗೆ ಸಲಹೆ ನೀಡಿದ್ದಾರೆ. ಕಾಂಗ್ರೆಸ್ ವೀಕ್ಷಕರು ಗುಲಾಮಗಿರಿ ಮಾಡಲು ಬಂದವರು. ಜನರ ಕಲ್ಯಾಣ ಮಾಡದ ಕಾಂಗ್ರೆಸ್ ಪಕ್ಷವನ್ನು ಬೆತ್ತಲೆ ಮಾಡುತ್ತೇನೆ. ಕಾಂಗ್ರೆಸ್ ಭವನ ಕಟ್ಟೋಕೆ 7 ಲಕ್ಷ 50 ಸಾವಿರ ಕೊಟ್ಟಿದ್ದಿನಿ ಅದನ್ನು ವಾಪಸ್ಸು ಕೊಡಿ‌ ಎಂದಿದ್ದಾರೆ. ಹೆಲಿಕಾಪ್ಟರ್ ಮೂಲಕ ತಿರಗೋ ಸತೀಶ ಜಾರಕಿಹೊಳಿ ಮಾತ್ರ ಕಾಂಗ್ರೆಸ್ ಮುಖಂಡರಾ ? ಕಾಂಗ್ರೆಸ್ ನಿಂದ ಟಿಕೆಟ್ ಸಿಗದಿದ್ದರು ಬೆಳಗಾವಿ ದಕ್ಷಿಣ ಕ್ಷೇತ್ರದಿಂದ ಸ್ಪರ್ಧೆ ಮಾಡ್ತಿನಿ. ಬಲಾಢ್ಯರು ಹೆಚ್ಚಿಗೆ ಇದ್ದಾಗ ನಮ್ಮಂತ ನಿಷ್ಠಾವಂತ ಕಾರ್ಯಕರ್ತರಿಗೆ ಬೆಲೆ ಇರಲ್ಲ. ರಾಜ್ಯದಲ್ಲಿ ಕಾರ್ಯಕರ್ತರು ಮನೆ ಮಠ ಮಾರಿ ಪಕ್ಷವನ್ನು ಕಟ್ಟಿದ್ದಾರೆ.  ಅವರನ್ನು ಕಾಂಗ್ರೆಸ್ ಕಡೆಗಣಿಸಿದೆ‌‌. ಸತೀಶ ಜಾರಕಿಹೊಳಿ, ಫಿರೋಜ್ ಶೇಠ್ ಬೆಂಬಲಿಗರು ನನಗೆ ಕೊಲೆ ಮಾಡೋದಾಗಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.

Leave a Reply

Your email address will not be published.