ಸರ್ಕಾರಿ ನೌಕರರಿಗೆ ರಾಜ್ಯಸರ್ಕಾರದಿಂದ ಬಂಪರ್‌ ಗಿಫ್ಟ್‌ : ವೇತನ ಹೆಚ್ಚಳದ Details ಇಲ್ಲಿದೆ

ಬೆಂಗಳೂರು : ರಾಜ್ಯ ಸರ್ಕಾರಿ ನೌಕರರಿಗೆ ಸಿಎಂ ಸಿದ್ದರಾಮಯ್ಯ ಸರ್ಕಾರದಿಂದ ಬಂಪರ್‌ ಲಾಟರಿ ಹೊಡೆದಿದೆ. ಸುಮಾರು 5.20 ಲಕ್ಷ ಸರ್ಕಾರಿ ನೌಕರರ ವೇತನ ಶೇ.30ರಷ್ಟು ಹೆಚ್ಚಳವಾಗಿದ್ದು, ಈ ಕುರಿತು 6ನೇ ವೇತನ ಆಯೋಗ ಸಲ್ಲಿಸಿದ್ದ ವರದಿಗೆ ಒಪ್ಪಿಗೆ ಸೂಚಿಸಲಾಗಿದೆ.

ಎ.ಆರ್ ಶ್ರೀನಿವಾಸಮೂರ್ತಿ ನೇತೃತ್ವದಲ್ಲಿ ರಾಜ್ಯ ಸರ್ಕಾರಿ ನೌಕರರ ವೇತನ ಪರಿಷ್ಕರಣೆ ಸಂಬಂಧ ಸರ್ಕಾರ ರಚಿಸಿದ್ದ 6ನೇ ವೇತನ ಆಯೋಗ ತನ್ನ ವರದಿಯ ಮೊದಲ ಸಂಪುಟವನ್ನು ಸಿಎಂಗೆ ಸಲ್ಲಿಸಿತ್ತು.
5.20 ಲಕ್ಷ ಸರ್ಕಾರಿ ನೌಕರರಿಗೆ ಶೇ.30ರಷ್ಟು ವೇತನ ಹೆಚ್ಚಳವಾಗಿದ್ದು, 73 ಸಾವಿರ ಅನುದಾನಿಚ ಶಿಕ್ಷಣ ಸಂಸ್ಥೆಗಳ ಬೋಧಕೇತರ ಸಿಬ್ಬಂದಿಗೂ ಅನ್ವಯವಾಗಲಿದೆ. ಈ ಯೋಜನೆ ಜಾರಿಯಾದಲ್ಲಿ 5.73ಲಕ್ಷ ಪಿಂಚಣಿದಾರರಿಗೆ ಲಾಭದಾಯಕವಾಗಲಿದೆ. ಈ ಯೋಜನೆ ಪ್ರಕಾರ ಕನಿಷ್ಟ ವೇತನ 17 ಸಾವಿರವಿದ್ದು, ಗರಿಷ್ಠ ವೇತನ 1,50,600ರೂ ಇರಲಿದೆ.

ಅಲ್ಲದೆ ವಿಕಲ ಚೇತನ ನೌಕರರಿಗೆ ತ್ರಿಚಕ್ರ ವಾಹನ ಖರೀದಿಗೆ ನೀಡುತ್ತಿದ್ದ ಸಹಾಯ ಧನವನ್ನು 25 ಸಾವಿರದಿಂದ 40 ಸಾವಿರಕ್ಕೆ ಹೆಚ್ಚಿಸಲಾಗಿದೆ.

ವೇತನ ಹೆಚ್ಚಳದಿಂದಾಗಿ ಭತ್ಯೆ ಹಾಗೂ ಪಿಂಚಣಿ ಪರಿಷ್ಕರಣೆಯಿಂದ 10, 508 ಕೋಟಿ ಹೆಚ್ಚುವರಿ ಹೊರೆ ಸರ್ಕಾರದ ಮೇಲೆ ಬೀಳಲಿದೆ.

Leave a Reply

Your email address will not be published.

Social Media Auto Publish Powered By : XYZScripts.com