ಹೆಚ್ಚಿದ “ಕೈ” ಬಲ : BJP ಬಿಟ್ಟು ಕಾಂಗ್ರೆಸ್‌ಗೆ ಸೇರ್ಪಡೆಗೊಂಡ ಆನಂದ್‌ ಸಿಂಗ್‌

ಬೆಂಗಳೂರು : ಬಿಜೆಪಿ ತೊರೆದಿದ್ದ ಮಾಜಿ ಶಾಸಕ ಆನಂದ್ ಸಿಂಗ್ ಅವರು ಇಂದು ನಗರದ ಕೆಪಿಸಿಸಿ ಕಚೇರಿಯಲ್ಲಿ ಸಿಎಂ ಸಿದ್ದರಾಮಯ್ಯ, ಅಧ್ಯಕ್ಷ ಪರಮೇಶ್ವರ್ ಸಮ್ಮುಖದಲ್ಲಿ ಕಾಂಗ್ರೆಸ್ ಗೆ ಸೇರ್ಪಡೆಯಾಗಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿಂದು ಕಾಂಗ್ರೆಸ್‌ ಧ್ವಜವನ್ನು ಆನಂದ್‌ ಸಿಂಗ್‌ ಅವರಿಗೆ ನೀಡುವ ಮೂಲಕ, ಜಿ. ಪರಮೇಶ್ವರ್‌ , ಆನಂದ್‌ ಸಿಂಗ್‌ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡಿದ್ದಾರೆ. ಬಳಿಕ ಸುದ್ದಿಗಾರರೊಂದಿಗೆ ಮಾತನಾಡದ ಸಿಂಗ್‌, ನನ್ನದು ಸೆಕ್ಯುಲರ್‌ ಮೆಂಟಾಲಿಟಿ. ಬಿಜೆಪಿಯಿಂದ ಎರಡು ಬಾರಿ mla ಆಗಿ ಆಯ್ಕೆಯಾಗಿದ್ದೆ. ಸರ್ವರಿಗೂ ಸಮಬಾಳು ಎಂಬುದು ನನ್ನ ತತ್ವ. ಮತ್ತೊಮ್ಮೆ ಕಾಂಗ್ರೆಸ್‌ ಅಧಿಕಾರಕ್ಕೆ ಬರುತ್ತದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.

ಕೇವಲ ನಾನೊಬ್ಬ ಮಾತ್ರವಲ್ಲ, ಬಿಜೆಪಿಯ ಅನೇಕರು ಸದ್ಯದಲ್ಲೇ ಕಾಂಗ್ರೆಸ್‌ಗೆ ಸೇರ್ಪಡೆಯಾಗಲಿದ್ದಾರೆ. ಎಲ್ಲರೂ ಸೇರಿ ಕಾಂಗ್ರೆಸ್‌ ಗೆಲುವಿಗಾಗಿ ಶ್ರಮಿಸುವುದಾಗಿ ಹೇಳಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com