Cricket U-19 ವಿಶ್ವಕಪ್ : ಪಾಕ್ ವಿರುದ್ಧ 203 ರನ್ ಭರ್ಜರಿ ಜಯ : ಫೈನಲ್‍ಗೆ ಭಾರತ

ನ್ಯೂಜಿಲೆಂಡಿನ ಕ್ರೈಸ್ಟ್ ಚರ್ಚ್ ನಲ್ಲಿ ಮಂಗಳವಾರ ನಡೆದ ಅಂಡರ್-19 ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಭಾರತ, ಪಾಕಿಸ್ತಾನದ ವಿರುದ್ಧ 203 ರನ್ ಗಳ ಭರ್ಜರಿ ಜಯ ಗಳಿಸಿ ಫೈನಲ್ ಪ್ರವೇಶಿಸಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತಕ್ಕೆ ಓಪನಿಂಗ್ ಜೋಡಿ ಮನೋಜ್ ಕಾಲ್ರಾ (47) ಹಾಗೂ ಪೃಥ್ವಿ ಶಾ (41) ರನ್ ಗಳಿಸಿ ಉತ್ತಮ ಆರಂಭ ಒದಗಿಸಿದರು. ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ ಶುಭಮನ್ ಗಿಲ್ (102 ರನ್) ಶತಕ ಬಾರಿಸಿದರು. ಪರಿಣಾಮವಾಗಿ ಭಾರತ 50 ಓವರುಗಳಲ್ಲಿ 9 ವಿಕೆಟ್ ನಷ್ಟಕ್ಕೆ 272 ರನ್ ಕಲೆಹಾಕಿತು. ಪಾಕ್ ಪರವಾಗಿ ಮಹಮ್ಮದ್ ಮೂಸಾ 4 ಹಾಗೂ ಅರ್ಶದ್ ಇಕ್ಬಾಲ್ 3 ವಿಕೆಟ್ ಪಡೆದರು.

ಶುಭಮನ್ ಗಿಲ್ (102 ರನ್)

ಗುರಿಯನ್ನು ಬೆನ್ನತ್ತಿದ ಪಾಕಿಸ್ತಾನ 29.3 ಓವರುಗಳಲ್ಲಿ 69 ರನ್ ಸೇರಿಸಿ ಆಲೌಟ್ ಆಯಿತು. ಭಾರತದ ಪರವಾಗಿ ಇಶಾನ್ ಪೊರೆಲ್ 4, ಶಿವಾ ಸಿಂಗ್ 2, ರಿಯಾನ್ ಪರಾಗ್ 2 ವಿಕೆಟ್ ಪಡೆದರು. ಶತಕ ಸಿಡಿಸಿದ ಶುಭಮನ್ ಗಿಲ್ ಪಂದ್ಯಶ್ರೇಷ್ಟ ಪ್ರಶಸ್ತಿ ಪಡೆದರು.

ಫೆಬ್ರುವರಿ 3 ರಂದು ಆಸ್ಟ್ರೇಲಿಯಾ ಹಾಗೂ ಭಾರತ ತಂಡಗಳ ನಡುವೆ ಫೈನಲ್ ಫೈಟ್ ನಡೆಯಲಿದೆ.

Leave a Reply

Your email address will not be published.

Social Media Auto Publish Powered By : XYZScripts.com