ಮುಸ್ಲಿಂ ಮಹಿಳೆಯರು Football ನೋಡುವುದು ಹರಾಮ್ : ದಾರುಲ್ ಉಲೂಮ್ Fatwa..!

ಮುಸ್ಲಿಂ ಮಹಿಳೆಯರು ಫುಟ್ಬಾಲ್ ಆಟವನ್ನು ವೀಕ್ಷಿಸುವುದು ಹರಾಮ್ ಆಗಿದ್ದು, ಅದು ಇಸ್ಲಾಮ್ ಧರ್ಮಕ್ಕೆ ವಿರುದ್ಧವಾಗಿದೆ ಎಂದು ದಾರುಲ್ ಉಲೂಮ್ ದಿಯೊಬಂದ್ ನ ಮುಫ್ತಿಯಾಗಿರುವ ಅಥರ್ ಕಾಸ್ಮಿ ಫತ್ವಾ ಹೊರಡಿಸಿದ್ದಾರೆ.

Image result for athar kasmi

‘ ಮುಸ್ಲಿಂ ಮಹಿಳೆಯರು ಪರುಷರು ಫುಟ್ಬಾಲ್ ಆಡುವುದನ್ನು ನೋಡಬಾರದು, ಫುಟ್ಬಾಲ್ ಆಡುವಾಗ ಪುರುಷರು ಶಾರ್ಟ್ಸ್ ಧರಿಸಿರುತ್ತಾರೆ. ಹೆಂಗಸರು ಗಂಡಸರ ಮೊಣಕಾಲುಗಳನ್ನು ನೋಡಬಾರದು ‘ ಎಂದು ಫತ್ವಾದಲ್ಲಿ ಹೇಳಲಾಗಿದೆ.

Image result for saudi women watching football

‘ ಮಹಿಳೆಯರು ಫುಟ್ಬಾಲ್ ನೋಡುವುದಕ್ಕೆ ಏನು ಅರ್ಥವಿದೆ. ಅದರಿಂದ ಏನು ಲಾಭವಿದೆ..? ಅವರು ಆಟಗಾರರ ತೊಡೆ ಹಾಗೂ ಬರಿಗಾಲಿನತ್ತ ನೋಡುತ್ತಾರೆಯೇ ಹೊರತು ಸ್ಕೋರ್ ಕಡೆಗೆ ಗಮನಿಸುವುದಿಲ್ಲ ‘ ಎಂದು ಅಥರ್ ಕಾಸ್ಮಿ ಹೇಳಿದ್ದಾರೆ.

ತಮ್ಮ ಹೆಂಡತಿಯರಿಗೆ ಫುಟ್ಬಾಲ್ ನೋಡಲು ಅವಕಾಶ ಕೊಡುವ ಗಂಡಸರಿಗೆ ಅಥರ್ ಕಾಸ್ಮಿ, ‘ ನಿಮಗೆ ಸ್ವಲ್ಪವೂ ನಾಚಿಕಯಾಗುವುದಿಲ್ಲವೆ..? ದೇವರ ಬಗ್ಗೆ ಭಯವಿಲ್ಲವೇ..? ನಿಮ್ಮ ಪತ್ನಿಯರಿಗೆ ಇಂತಹದನ್ನೆಲ್ಲ ನೋಡಲು ಬಿಡುತ್ತೀರಾ..? ಎಂದು ಪ್ರಶ್ನಿಸಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com