ಒಂದು ಸಲ BJP ಜೊತೆ ಮೈತ್ರಿ ಮಾಡಿಕೊಂಡಿದ್ದೇ ಸಾಕು, ಇನ್ನು ಅದರ ಮಾತಿಲ್ಲ : HDK

ವಿಜಯಪುರ : ನಾಡಿನ ಜನತೆಯ ತಲೆ ಮೇಲೆ 2 ಲಕ್ಷ 90 ಸಾವಿರ ಕೋಟಿ ಸಾಲದ ಹೊರೆ ಹೊರೆಸಿದ್ದೆ  ಸಿದ್ದರಾಮಯ್ಯ ಸರ್ಕಾರದ ಸಾಧನೆ. ಸರ್ಕಾರ ಮಾಡ ಹೊರಟಿರೋ ಬಜೆಟ್ ಮಂಡನೆ ಬರಿ ತಾತ್ಕಾಲಿಕವಷ್ಟೇ ಎಂದು ಮಾಜಿ ಸಿಎಂ ಎಚ್‌.ಡಿ ಕುಮಾರಸ್ವಾಮಿ ಸಿಎಂ ಸಿದ್ದಾರಾಮಯ್ಯ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

ಮೈಸೂರು ಮಿನರಲ್ ಹಗರಣ ವಿಚಾರ ಸಂಬಂಧ ಮಾತನಾಡಿದ ಎಚ್‌ಡಿಕೆ, ಅದು ಸ್ಯಾಂಪಲ್ ಮಾತ್ರ. ಅಬಿ ಪಿಕ್ಚರ್ ಬಾಕಿ ಹೇ ಎಂದಿದ್ದಾರೆ. 5000 ಕೋಟಿ ರೂಪಾಯಿ ಹಗರಣದ ದಾಖಲೆಗಳ ಬಿಡುಗಡೆ ಮಾಡಿದ್ದೀನಿ. ಅವು ಸರ್ಕಾರದ ದಾಖಲೆಗಳು. ಈವರೆಗೆ ಸಿಎಂ ಪ್ರತಿಕ್ರಿಯೆ ನೀಡಿಲ್ಲ.  ಸಚಿವ ವಿನಯ ಕುಲಕರ್ಣಿಗೆ ಬರೆದುಕೊಟ್ಟು ಹೇಳಿಕೆ ಕೊಡಿಸಲಾಗಿದೆ ಎಂದು ಆರೋಪಿಸಿದ್ದು, ಯಾವುದೋ ಭ್ರಷ್ಟಾಚಾರದ ದಾಖಲೆ ಬಿಡುಗಡೆ ಮಾಡಿ ಜನರ ಗಮನವನ್ನು ಡೈವರ್ಟ್ ಮಾಡಲ್ಲ ಎಂದಿದ್ದಾರೆ.

ಬಿಜೆಪಿ ಹಾಗೂ AIMIM ಒಳ ಒಪ್ಪಂದ ಹಿನ್ನೆಲೆಯಲ್ಲಿ ಗೃಹ ಸಚಿವ ರಾಮಲಿಂಗಾರೆಡ್ಡಿ ಹೇಳಿಕೆಗೆ ತಿರುಗೇಟು ನೀಡಿದ ಎಚ್‌ಡಿಕೆ, ಒಳ ಒಪ್ಪಂದ ಬಗ್ಗೆ ಸ್ಪಷ್ಟ ಮಾಹಿತಿ ಇದ್ರೆ ಜನತೆ ಮುಂದೆ ಇಡಬೇಕು. ಕಾಂಗ್ರೆಸ್ ಗೆ ಮುಸ್ಲಿಂ ಮತಗಳು ಹಿನ್ನಡೆಯಾಗಿ ಕರ್ನಾಟಕದಲ್ಲಿ ಕಾಂಗ್ರೆಸ್ ಧೂಳಿಪಟ ಆಗುವುದೆಂಬ ಭಯವಿದೆ ಎಂದಿದ್ದಾರೆ.

ಒಂದು ಬಾರಿ ಕಾಂಗ್ರೆಸ್ ಹಾಗೂ ಒಂದು ಬಿಜೆಪಿ ಮೈತ್ರಿ ಮಾಡಿಕೊಂಡು ನೋಡಿದ್ದಾಗಿದೆ. ಈ ಬಾರಿ ಸ್ವತಂತ್ರವಾಗಿ 113 ಸಂಖ್ಯೆಯನ್ನು ಜನತೆ ಕೊಡ್ತಾರೆ. ಈ ಬಾರಿ ಅತಂತ್ರ ಪರಿಸ್ಥಿತಿ ಆಗಲ್ಲ. ಫೆಬ್ರವರಿ 17ರಂದು ಎಚ್.ಡಿ. ದೇವೇಗೌಡರ ಆಶೀರ್ವಾದ ಹಾಗೂ ಮಾರ್ಗದರ್ಶನದೊಂದಿಗೆ, ಸುಮಾರು 5 ಲಕ್ಷ ಜೆಡಿಎಸ್ ಕಾರ್ಯಕರ್ತರ ಸಮಾವೇಶ ಸಮ್ಮುಖದಲ್ಲಿ ಜೆಡಿಎಸ್‌ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com