ಕಾಂಗ್ರೆಸ್‌ ಜೊತೆಗಿರುವ ಮುಸಲ್ಮಾನರೆಲ್ಲ ಕೊಲೆಗಡುಕರು : K.S ಈಶ್ವರಪ್ಪ

ತುಮಕೂರು : ಓವೈಸಿ ಜೊತೆ ಬಿಜೆಪಿ ಸಂಪರ್ಕವಿದೆ ಎಂದು ಕಾಂಗ್ರೆಸ್‌ ನಾಯಕರ ಆರೋಪ ವಿಚಾರ ಸಂಬಂಧ ಬಿಜೆಪಿ ಮುಖಂಡ ಕೆ.ಎಸ್‌ ಈಶ್ವರಪ್ಪ ಪ್ರತಿಕ್ರಿಯಿಸಿದ್ದು, ಗೃಹಮಂತ್ರಿಗೆ ತಾಕತ್ತಿದ್ರೆ ದಾಖಲೆ ಬಿಡುಗಡೆ ಮಾಡಲಿ. ದಾಖಲೆ ಬಿಡುಗಡೆ ಮಾಡಿದ್ರೆ ಮಾತ್ರ ಅವರು ಯೋಗ್ಯರು. ಬಿಜೆಪಿಯ ಘನತೆ ಕಡಿಮೆ ಮಾಡಲು ಕಾಂಗ್ರೆಸ್ ನಾಯಕರು ಪ್ರಯತ್ನ ಮಾಡುತಿದ್ದಾರೆ. ಓವೈಸಿಗೂ ನಮಗೂ ಯಾವುದೇ ಸಂಬಂಧ ಇಲ್ಲ. ಕಾಂಗ್ರೆಸ್ ನವರು ಒಂದೊಂದು ಕಾಲದಲ್ಲಿ ಒಂದೊಂದು ವಿವಾದ ಹುಟ್ಟುಹಾಕ್ತಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಕಾಂಗ್ರೆಸ್‌ನವರು ವೀರಶೈವ ಲಿಂಗಾಯತ, ಮಹದಾಯಿ ವಿವಾದ ಸೃಷ್ಟಿಸಿದರು. ಜಾತಿ ಜಾತಿ ನಡುವೆ ತಂದಿಕ್ಕುವ ಕೆಲಸ ಮಾಡಿದ್ರು. ಈಗ ಧರ್ಮ ಧರ್ಮದ ನಡುವೆ ತಂದಿಕ್ಕುವ ಕೆಲಸ ಮಾಡುತಿದ್ದಾರೆ. ಮುಸಲ್ಮಾನರು ಯಾರ ಸ್ವತ್ತು ಅಲ್ಲ. ಕಾಂಗ್ರೆಸ್ ಜೊತೆ ಇರೋರು ಕೊಲೆಗಡುಕ ಮುಸಲ್ಮಾನರು. 22 ಜನ ಆರ್‌ಎಸ್ ಎಸ್ ಕಾರ್ಯಕರ್ತರನ್ನು ಕೊಲೆ ಮಾಡಿದ ಮುಸಲ್ಮಾನರು ಅವರ ಜೊತೆ ಇರುವುದಾಗಿ ಹೇಳಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com