ಈ ದೇಶದಲ್ಲಿ ಮತ್ತೊಬ್ಬ ದೇವೇಗೌಡ ಹುಟ್ಟಲು ಸಾಧ್ಯವೇ ಇಲ್ಲ : H.D ದೇವೇಗೌಡ

ರಾಮನಗರ : ನಮ್ಮದು ಸಣ್ಣ ಕುಟುಂಬ. ನಾನು ಸಾಮಾನ್ಯ ರೈತನ ಮಗ. ಹತ್ತಾರು ವರ್ಷಗಳಿಂದ ಹಲವು ಪೆಟ್ಟುಗಳನ್ನು ತಿಂದಿದ್ದೇನೆ. ದೇವೇಗೌಡ ಮುಗಿದೇ ಹೋದ ಎಂದ ಸಂಧರ್ಭದಲ್ಲಿ ರೈತರು ನನ್ನ ಕೈ ಹಿಡಿದಿದ್ದಾರೆ ಎಂದು ಮಾಜಿ ಪ್ರಧಾನಿ ಎಚ್‌.ಡಿ ದೇವೇಗೌಡರು ಹೇಳಿದ್ದಾರೆ.

ನಿಮ್ಮಪ್ಪನ ಬಿಟ್ಟು ಹೊರಗಡೆ ಬಾ ನಿನ್ನ ಮುಖ್ಯಮಂತ್ರಿ ಮಾಡ್ತೀವಿ ಎಂದು ಕುಮಾರಸ್ವಾಮಿ ಅವರಿಗೆ ಹೇಳುತ್ತಾರೆ ಇಲ್ಲಿನ ಮಹಾನುಭಾವ ಶಾಸಕ ಬಾಲಕೃಷ್ಣ. ಈ ದೇಶದಲ್ಲಿ ಮತ್ತೊಬ್ಬ ದೇವೇಗೌಡ ಹುಟ್ಟಲು ಸಾಧ್ಯವಿಲ್ಲ. ಗೌಡ ಎಂದರೆ ಜಾತಿ ಅಲ್ಲ, ಊರಿನಲ್ಲಿ ಗೌಡರು ಇದ್ದಾರೆ. ಎಲ್ಲಾ ಜಾತಿಯಲ್ಲೂ ಗೌಡರು ಇದ್ದಾರೆ. ನಾನು ದ್ರೋಹ ಮಾಡಿದ್ದೀನಿ ಅಂತಾರೆ, ನಾನು ಯಾರಿಗೆ ದ್ರೋಹ ಮಾಡಿದ್ದೀನಿ ?. ನೇರವಾಗಿ ಸಿದ್ದರಾಮಯ್ಯನವರೇ ನಿಮ್ಮನ್ನ ಕೇಳ್ತೀನಿ, ಯಾರಿಗೆ ದ್ರೋಹ ಮಾಡಿದ್ದೀನಿ ಹೇಳಿ ಎಂದು ಪ್ರಶ್ನಿಸಿದ್ದಾರೆ.

ನಾನು ಯಾವ ಜಾತಿಗೂ ದ್ರೋಹ ಮಾಡಿಲ್ಲ. ಮಹಿಳೆಯರಿಗೆ 33%  ಮೀಸಲಾತಿ ಮಾಡಿದ್ದು ಯಾರು, ನಾಲಿಗೆ ಇದ್ರೆ ಅದನ್ನ ಹೇಳಲಿ. ನಮ್ಮಂತೆ ಎಲ್ಲಾ ಜಾತಿಯವರು, ನಾನು ಯಾರಿಗೂ ದ್ರೋಹ ಮಾಡಬಾರದು ಎಂದುಕೊಂಡಿದ್ದೇನೆ. ನಾನು ಯಾವ ಸಮಾಜಕ್ಕೆ ದ್ರೋಹ ಮಾಡಿದ್ದೀನಿ ಎಂಬುದನ್ನು ಹೇಳಲಿ ನೋಡೋಣ ಎಂದಿದ್ದಾರೆ.

ನಾನು ಬದುಕಿದ್ದಾಗ ಎಲ್ಲವನ್ನೂ ಮಾತನಾಡ್ತಾರೆ. ಕಳೆದ ಚುನಾವಣೆಯಲ್ಲಿ ಕೂಟಗಲ್ ನಲ್ಲಿ ಭಾಷಣ ಮಾಡಿ ಕುಮಾರಸ್ವಾಮಿ ಅತ್ತು ಬಾಲಕೃಷ್ಣ ಸೋತರೆ ನಾನು ಸೋತ ಹಾಗೆ ಎಂದು. ಆದರೆ ಈಗ ಹೇಳ್ತಾರೆ ನನ್ನ‌ ವಿರುದ್ದ ಕುಮಾರಸ್ವಾಮಿ ಬೇಕಾದರೆ ಸ್ಪರ್ಧೆ ಮಾಡಲಿ, ನಾನು ಗೆಲ್ತೀನಿ ಅಂತ. ಜನ ಬಲ ದೊಡ್ಡದೋ ಅಥವಾ ಪಾಪದ ಧನ ಬಲ ದೊಡ್ಡದೋ ನೋಡೋಣ ಎಂದು ಭಾವುಕರಾಗಿದ್ದಾರೆ.

Leave a Reply

Your email address will not be published.